ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 20–2–1967

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲಿಮೆಯ ಮೇಲೆ ಹಲ್ಲೆ ಪ್ರಕರಣ ಕೂಲಂಕುಷ ತನಿಖೆ ನಡೆಸಲು ಕೇಂದ್ರ ಗೃಹ ಶಾಖೆಗೆ ಸೂಚನೆ
ಮುಂಘೇರ್, ಫೆ. 19
– ಪಾರ್ಲಿಮೆಂಟ್ ಸದಸ್ಯ ಶ್ರೀ ಮಧು ಲಿಮಯೆ ಅವರ ಮೇಲೆ ಇತ್ತೀಚೆಗೆ ನಡೆದ ಹಲ್ಲೆಯ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ಪ್ರಧಾನ ಮಂತ್ರಿಗಳು ಕೇಂದ್ರ ಗೃಹ ಸಚಿವ ಶಾಖೆಗೆ  ಸೂಚನೆ ನೀಡಿದ್ದಾರೆ.

ಆ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಪ್ರಧಾನ ಮಂತ್ರಿಗಳು ಇದಕ್ಕೆ ಮೊದಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು. ಶ್ರೀ ಲಿಮಯೆ ಅವರ ಪತ್ನಿ ಚಂಪಾ ಲಿಮಯೆ ಹಾಗೂ ಅನೇಕ ರಾಜಕೀಯ ನಾಯಕರ ಕೋರಿಕೆಯನುಸಾರ ಪ್ರಧಾನ ಮಂತ್ರಿಗಳು ಈಗ ಕೇಂದ್ರ ಗೃಹ ಸಚಿವೆ ಶಾಖೆಗೆ ಸೂಚನೆ ನೀಡಿದ್ದಾರೆ.

ನಾಲ್ಕನೆ ಮಹಾಚುನಾವಣೆ: ರಾಜ್ಯದಲ್ಲಿ ಮತದಾನ ಮುಕ್ತಾಯ
ಬೆಂಗಳೂರು, ಫೆ. 19–
ಮುಂಬರುವ ಐದು ವರ್ಷಗಳಲ್ಲಿ ರಾಜ್ಯದ ಆಡಳಿತವನ್ನು ಯಾರು ನಡೆಸಬೇಕೆಂಬ ತೀರ್ಮಾನ ಕೈಗೊಳ್ಳುವ ಕಾರ್ಯವನ್ನು ರಾಜ್ಯದ ಜನತೆ ಇಂದು ಮಾಡಿ ಮುಗಿಸಿತು.

ಬಿರುಸಿನಿಂದ ಮತದಾನ ನಡೆದ ಬೆಂಗಳೂರು ನಗರವೂ ಸೇರಿ ಉಳಿದಿದ್ದ 12 ಲೋಕಸಭೆ ಹಾಗೂ 95 ವಿಧಾನಸಭಾ  ಕ್ಷೇತ್ರಗಳಲ್ಲಿ ಇಂದು ಹುರುಪಿನಿಂದ ಮತದಾನ ಜರುಗಿ ರಾಜ್ಯದ 27 ಲೋಕಸಭೆ ಹಾಗೂ 214 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣವಾದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT