ಉಮೇಶ್ ಅವರು ಒಳ್ಳೆಯ ಬರಹಗಾರರೂ ಆಗಿದ್ದರು. ಅವರನ್ನು ಬರಹಕ್ಕೆ ಹಚ್ಚುವ ಅವಕಾಶ ನನಗೆ ಒದಗಿತ್ತು. ಅವರೊಂದಿಗೆ ಕೂತು ಚರ್ಚಿಸಿ, ಒತ್ತಡ ಹೇರಿ ಬರೆಸುತ್ತಿದ್ದೆ. ‘ಮಲ್ಲಿಗೆ’, ‘ತುಷಾರ’ ನಿಯತಕಾಲಿಕಗಳಲ್ಲಿಅವರಿಂದ ಬಹಳ ಲೇಖನಗಳನ್ನು ಬರೆಸಿದೆ. ಅವರಿಂದ ಬಹಳಷ್ಟು ಸಂದರ್ಶನಗಳನ್ನು ಮಾಡಿಸಿದ್ದೆ. ನಿಧಾನವಾಗಿ ಅವರೊಳಗಿನ ಬರಹಗಾರ ಹೊರಬಂದ. ಬರವಣಿಗೆಯಲ್ಲಿನ ಜೀವಂತಿಕೆ ಅವರ ಆತ್ಮಕತೆ ‘ಗಂಟೆ’ಯಲ್ಲಿ ಓದುಗರ ಅನುಭವಕ್ಕೆ ಬರುತ್ತದೆ.