ಹಳೆಯ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳಿದ್ದಾಗ ವ್ಯಾಪಾರ–ವಹಿವಾಟಿಗೆ ಅನುಕೂಲ ಇತ್ತು. ಚಿಲ್ಲರೆ ಸಮಸ್ಯೆ ಕಾಡುತ್ತಿರಲಿಲ್ಲ.
₹ 2000 ಮುಖಬೆಲೆಯ ನೋಟಿನಿಂದ ನಮ್ಮಂಥ ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ. ಗ್ರಾಹಕರು ₹ 2000ದ ನೋಟು ಕೊಟ್ಟರೆ ಚಿಲ್ಲರೆ ಹೊಂದಿಸುವುದೇ ಸಮಸ್ಯೆಯಾಗುತ್ತದೆ. ಈ ನೋಟಿನ ಮುದ್ರಣ ಕಡಿಮೆ ಮಾಡದಿದ್ದಲ್ಲಿ ಸಮಸ್ಯೆ ಹೀಗೆಯೇ ಮುಂದುವರಿಯುತ್ತದೆ.
- ಗುರು ಜಗಳೂರು,
ಹರಿಹರ