ಇತ್ತೀಚೆಗೆ ಸುಪ್ರೀಂ ಕೋರ್ಟ್ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು ತಮ್ಮ ‘ಅನುರಣನ’ ಅಂಕಣದಲ್ಲಿ (ಪ್ರ.ವಾ., ಜ.16) ಅರ್ಥಪೂರ್ಣವಾಗಿ ಬೆಳಕು ಚೆಲ್ಲಿದ್ದಾರೆ.

ನಿಜ, ನಾಲ್ಕೂ ನ್ಯಾಯಾಧೀಶರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಈ ಬೃಹತ್ ರಾಷ್ಟ್ರದ ಮಹೋನ್ನತ ನ್ಯಾಯಾಲಯದ ಬಗ್ಗೆ ಕೆಲವು ಗುಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ಸ್ಪಷ್ಟಪಡಿಸಬೇಕಾಗಿತ್ತು. ಈ ನೆಲೆಯಲ್ಲಿ ಎ.ನಾರಾಯಣ ಅವರ ವ್ಯಾಖ್ಯಾನ ಕೆಲವು ಮೂಲಭೂತ ಸೂಕ್ಷ್ಮಗಳನ್ನು ಪರಿಚಯಿಸಿದೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ರೀತಿಯ ಸಾಂಕೇತಿಕ ಪ್ರತಿಭಟನೆಯಿಂದ ತಲ್ಲಣಗೊಳ್ಳಬೇಕಾಗಿಲ್ಲ. ಪಾರದರ್ಶಕತೆ ಕುರಿತು ಎಂಥ ಪ್ರಶ್ನೆಗಳು ಬಂದರೂ ನಾವು ಸ್ವಾಗತಿಸಲೇಬೇಕು. ಅದು ಇಂಥಕಡೆ ಬರಬೇಕು, ಇಂಥ ಕಡೆ ಬರಬಾರದು ಎಂದು ಯೋಚಿಸುವ ಅಗತ್ಯವಿಲ್ಲ. ಇಂತಹದ್ದು ಹೆಚ್ಚು ಹೆಚ್ಚು ಆಂತರಿಕ ಸಂವಾದವಾಗಿಯೂ ಬೆಳೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.