ಭಾನುವಾರ, ಜನವರಿ 17, 2021
28 °C

ಸಮಾಜಸೇವೆಗೆ ನಾನಾ ಮಾರ್ಗ

ದೇವೇಂದ್ರಗೌಡ ಜಿರ್ಲಿ, ವದಗನಾಳ Updated:

ಅಕ್ಷರ ಗಾತ್ರ : | |

ಅಧಿಕಾರ ಚಲಾಯಿಸಿದವರಿಗೆ ಅಧಿಕಾರ ಬಿಟ್ಟುಕೊಡುವುದನ್ನೂ ಪ್ರಜಾಪ್ರಭುತ್ವ ಮೊದಲು ಕಲಿಸಿಕೊಡುತ್ತದೆ. ಒಂದೊಮ್ಮೆ ಸದಸ್ಯರಾಗಿ ನಿರಂತರ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಳ್ಳುವುದು ಸಹಜ. ಸೋತಾಗ ಕೊರಗುವುದು, ಗೆದ್ದಾಗ ಹಿಗ್ಗುವುದು ಮನುಷ್ಯನ ಗುಣ. ಆದರೆ ಒಬ್ಬ ವ್ಯಕ್ತಿಯೇ ನಿರಂತರವಾಗಿ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವದ ಪದ್ಧತಿಯಲ್ಲ. ಹೀಗಾಗಿ ಚುನಾವಣೆಯಲ್ಲಿ ಸೋಲಿನಿಂದ ಯಾರೂ ಕಂಗೆಡಬಾರದು. ಜನ ಯಾವುದನ್ನು ಒಪ್ಪಿಕೊಂಡರು ಎಂಬುದನ್ನು ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸೋಲಿನಲ್ಲಿ ಇಷ್ಟೊಂದು ಅಂತರ ಹೇಗೆ ಬಂತು ಎಂಬುದರ ವಿಶ್ಲೇಷಣೆಯ ಜೊತೆಗೆ ಮುಂದಿನ ಹೆಜ್ಜೆಗಳ ಬಗೆಗೆ ಚಿಂತನೆ ನಡೆಸಬೇಕು. ಅಲ್ಲದೆ ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸಿದ್ದರೆ ರಾಜಕೀಯವೇ ಯಾಕೆ ಬೇಕು? ರಾಜಕೀಯ ಮಾರ್ಗ ಸರಿಯಾಗುತ್ತಿಲ್ಲ ಅನಿಸಿದಾಗ ಸಮಾಜಸೇವೆಯ ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬಹುದು.

–ದೇವೇಂದ್ರಗೌಡ ಜಿರ್ಲಿ, ವದಗನಾಳ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು