ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ಹಾದಿಯಲ್ಲಿರುವರೇ?

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಅಟಲ್‌ಜಿ ಬಯಸಿದ್ದ ಹಾದಿಯಲ್ಲೇ ನಾವು ನಡೆಯುತ್ತಿದ್ದೇವೆ’ (ಪ್ರ.ವಾ., ಆ. 18) ಎಂದು ನರೇಂದ್ರ ಮೋದಿ ಹೇಳಿದ್ದನ್ನು ಓದಿ, ಹೌದಾ?! ಎಂದುಕೊಂಡೆ.

‘ಅಟಲ್’ ಎಂದರೆ ‘ದೃಢ’ ಎಂದರ್ಥ. ‘ವಾಜಪೇಯಿ’ ಒಂದು ಬಗೆಯ ಯಜ್ಞ. ಅವರು ‘ಬಿಹಾರಿ’ ಅಲ್ಲ. (ಮಧ್ಯಪ್ರದೇಶ, ಉತ್ತರ ಪ್ರದೇಶದವರು)!

2004ರ ಲೋಕಸಭಾ ಚುನಾವಣೆಗೆ ಮುನ್ನ ಟಿ.ವಿ. ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಕದಂ ಕದಂಪರ್ ಸಂಝೋತಾ ಕರನಾ ಪಡತಾ ಹೈ, ಉಸ್‌ ಕೇ ಲಿಯೇ ಕೀಮತ್ ಭೀ ಚುಕಾನಾ ಹೋಗಾ... ಮುಝೆ ಪಾರ್ಟಿ ಚಲಾನೀ ಹೈ’ (ಹೆಜ್ಜೆ ಹೆಜ್ಜೆಗೂ ರಾಜಿ, ಅದಕ್ಕೆ ಬೆಲೆ ತೆರುವುದು ಅನಿವಾರ್ಯ. ಪಕ್ಷ ನಡೆಸಬೇಕಲ್ಲ!) ಎಂದಿದ್ದರು.

‘ಜನತಂತ್ರ ಧನತಂತ್ರವಾಗುತ್ತ ಹೊರಟಿರುವುದು ಅಪಾಯಕಾರಿ ಸ್ಥಿತಿ’ ಎಂದಿದ್ದರು. ಮುಂದೆ ಸರ್ಕಾರಗಳ ನಿರ್ಧಾರದ ಮೇಲೆ ಬಂಡವಾಳಸ್ಥರ ಪ್ರಭಾವ ಆಗಲೂ ಬಹುದು ಎಂಬ ಅವರ ಮಾತು ಮಾರ್ಮಿಕ.

ಈಗ ಕಲಶ ಯಾತ್ರೆ ಮಾಡುತ್ತಿರುವವರು ತಮ್ಮ ಮನಸ್ಸು, ಕಾರ್ಯಗಳಲ್ಲಿ ಈ ನುಡಿಗಳನ್ನು ‘ಸಂಚಯಿಸಿ’ ಕೊಳ್ಳುವರೇ?

ಎಚ್.ಎಸ್. ಮಂಜುನಾಥ್, ಬೆಂಗಳೂರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT