ಬಾಬಾಬುಡನ್‌ಗಿರಿ: ಅಮಲು ಇಳಿಯಲಿ, ಮಾನವೀಯತೆ ಬೆಳೆಯಲಿ

7

ಬಾಬಾಬುಡನ್‌ಗಿರಿ: ಅಮಲು ಇಳಿಯಲಿ, ಮಾನವೀಯತೆ ಬೆಳೆಯಲಿ

Published:
Updated:

ಚಿಕ್ಕಮಗಳೂರು ಬಳಿ ಇರುವ ಬಾಬಾಬುಡನ್‌ಗಿರಿ ನೋಡಲೆಂದು ಇತ್ತೀಚೆಗೆ ನಾನು ಗೆಳೆಯರೊಂದಿಗೆ ತೆರಳಿದ್ದಾಗ, ದಾರಿ ಮಧ್ಯೆ ಸಿಕ್ಕ  ಹೋಟೆಲೊಂದರಲ್ಲಿ ಕಾಫಿ ಕುಡಿಯಲೆಂದು ಇಳಿದೆವು. ಅಲ್ಲಿಂದ ಹೊರಡುವ ಮುನ್ನ ಆ ಹೋಟೆಲ್‌ನ ಮಹಿಳಾ ಮಾಲೀಕರನ್ನು ‘ಬಾಬಾಬುಡನ್‌ಗಿರಿ ಇಲ್ಲಿಂದ ಇನ್ನೂ ಎಷ್ಟು ದೂರವಿದೆ?’ ಎಂದು ಕೇಳಿದೆವು. ಆಗ ಆಕೆ ತುಂಬಾ ಸಿಡಿಮಿಡಿಗೊಂಡು ತುಸು ಕೋಪದಿಂದಲೇ ‘ಅದು ಬಾಬಾಬುಡನ್‌ ಗಿರಿಯಲ್ಲ, ದತ್ತಪೀಠ. ನೀವೇನಾದರೂ ಇಲ್ಲಿ ಬಾಬಾಬುಡನ್‌ಗಿರಿ ಅಂತ ಯಾರನ್ನೇ ಕೇಳಿದರೂ ಅವರು ನಿಮ್ಮನ್ನು ಇಲ್ಲಿಂದಲೇ ವಾಪಸ್‌ ಕಳಿಸಿಬಿಡುತ್ತಾರೆ ಅಷ್ಟೆ’ ಎಂದು ಖಾರವಾಗಿ ಹೇಳಿದರು. ಅಂತಹ ನಡೆ ನುಡಿ ಕಂಡ ನನಗೆ ನಿಜವಾಗಿಯೂ ಆಶ್ಚರ್ಯದ ಜೊತೆಗೆ ದುಃಖವೂ ಆಯಿತು.

ಹಿಂದೂ– ಮುಸ್ಲಿಮರ ಭಾವೈಕ್ಯದ ಕೇಂದ್ರದಂತಿದ್ದ ಬಾಬಾಬುಡನ್‌ಗಿರಿ, ಧರ್ಮದ ಅಮಲೇರಿಸಿಕೊಂಡವರ ಕೈಗೆ ಸಿಲುಕಿ ನಲುಗುತ್ತಿರುವುದನ್ನು ಕಂಡು ಮನಸ್ಸು ಗಾಸಿಗೊಳಗಾಯಿತು. ಇಂತಹ ಮುಗ್ಧ ಜನರ ಮನಸ್ಸಿನೊಳಗೆ ಅವರಿಗೇ ಅರಿವಿಲ್ಲದಂತೆ ಅಡಗಿರುವ ಕೋಮುವಾದ ಅಳಿಯಲಿ, ಅವರೆಲ್ಲರ ಮನದಲ್ಲಿ ಮಾನವೀಯತೆ ಬೆಳೆಯಲಿ ಎಂಬುದೇ ನನ್ನ ಆಶಯ.

-ಅಪುರಾ, ಅಗಥಗೌಡನಹಳ್ಳಿ, ಗುಂಡ್ಲುಪೇಟೆ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !