ಗುರುವಾರ , ಜನವರಿ 28, 2021
23 °C

ಗೂಂಡಾ ಪಡೆ ನಿಗ್ರಹಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕೋಣನಕುಂಟೆಯ ಶ್ರೀನಿಧಿ ಬಡಾವಣೆ, ಚುಂಚಘಟ್ಟದ ಕಡೆ ಕೆಲವು ರೌಡಿಗಳು 70ರ ದಶಕದಲ್ಲಿ ತೋರುತ್ತಿದ್ದ ರೀತಿಯಲ್ಲಿ ಅಟ್ಟಹಾಸ ತೋರುತ್ತಿದ್ದಾರೆ. ನಾಗರಿಕರ ಮೇಲೆ ದೌರ್ಜನ್ಯ, ದೈಹಿಕ ಬಲ ಪ್ರಯೋಗಿಸಿದ ನಿದರ್ಶನಗಳಿವೆ. ಇವರಿಗೆ ಕೆಲವು ಗೂಂಡಾ ರಾಜಕಾರಣಿಗಳ ರಕ್ಷಣೆ ಇದೆ. ರಾಜಕಾರಣಿಗಳು ಹಾಗೂ ರೌಡಿಗಳ ಕಾನೂನುಬಾಹಿರ ಕೃತ್ಯಕ್ಕೆ ನೆರವಾಗುತ್ತಿರುವ ಕೆಲ ವ್ಯಕ್ತಿಗಳು ಈ ಬಡಾವಣೆಯ ಕ್ಷೇಮಾಭಿವೃದ್ಧಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದೇವೆ. ಕೆಲವು ಪೊಲೀಸರು ಸಹ ಇವರ ಬೆನ್ನಿಗಿದ್ದಾರೆ. ಹೀಗಾಗಿ, ಇಲ್ಲಿನ ರೌಡಿಗಳ ಅಡ್ಡಾವನ್ನು ಖಾಲಿ ಮಾಡಿಸಲು ಪೊಲೀಸ್ ಕಮಿಷನರ್‌ ಅವರು ಸೂಕ್ತ ಕ್ರಮ ಕೈಗೊಂಡು, ನಾಗರಿಕರು ಕ್ಷೇಮವಾಗಿ ಬದುಕಲು ಅವಕಾಶ ಮಾಡಿಕೊಡಬೇಕು.

- ಡಾ. ಗೋವಿಂದಸ್ವಾಮಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.