ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚಬೇಕಾದದ್ದು ಹೈಕಮಾಂಡ್ ಜಾಣ್ಮೆಯನ್ನಲ್ಲ!

Last Updated 1 ಆಗಸ್ಟ್ 2021, 17:11 IST
ಅಕ್ಷರ ಗಾತ್ರ

‘ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಜಾಣ್ಮೆ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಬಿಜೆಪಿಯ ಹೈಕಮಾಂಡನ್ನು ಕೊಂಡಾಡಿದ್ದಾರೆ (ಪ್ರ.ವಾ., ಜುಲೈ 29). ಬಿಜೆಪಿಯ ಹೈಕಮಾಂಡಿನ ಜಾಣ್ಮೆ ಮತ್ತು ಪ್ರಬುದ್ಧತೆಯನ್ನು ಕೊಂಡಾಡುವಂಥದ್ದೇನಿದೆ ಇಲ್ಲಿ ಎಂಬುದು ಅರ್ಥವಾಗುತ್ತಿಲ್ಲ. ಬದಲಿಗೆ ‘ಮೂಗು ಹಿಡಿದರೆ ಬಾಯಿ ತೆರೆಯಲೇ ಬೇಕಾಗುತ್ತದೆ’ ಎಂಬ ಲೋಕಾರೂಢಿಯ ಮಾತು ಹಾಗೂ ಸರಳ ಸತ್ಯವನ್ನು ಅರಿತು ಅದರಂತೆ ಬಿಜೆಪಿ ಹೈಕಮಾಂಡ್ ನಡೆದುಕೊಳ್ಳಲೇ ಬೇಕಾದಂಥ ಅನಿವಾರ್ಯವನ್ನು ಉಂಟುಮಾಡಿದ ಸಕಲ ಮಠಾಧೀಶರ ಜಾಣ್ಮೆ ಮತ್ತು ಬಲ್ಮೆಯನ್ನು ಎಷ್ಟು ಕೊಂಡಾಡಿದರೂ ಸಾಲದು!

ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳಿಗಾಗಿ ಹಾತೊರೆಯುವ ರಾಜಕಾರಣಿಗಳು ಸಾಮಾನ್ಯವಾಗಿ ಹೇಳುವ– ‘ನಾನೇನೂ ಸನ್ಯಾಸಿಯಲ್ಲ’ ಎಂಬ ಮಾತಿಗೆ ಸರಿಜೋಡಿಯಾಗಿ ‘ನಾವೇನೂ ರಾಜಕಾರಣಿಗಳಲ್ಲ’ ಎಂದು ಅವರುಗಳು ಹೇಳುವಂತೆಯೇ ಇಲ್ಲ. ಬದಲಿಗೆ ಮಠಾಧೀಶರುಗಳೂ ಬೇಕಾದರೆ ನಿಜವಾದ ಸನ್ಯಾಸಿಯ ಆದರ್ಶವಾದ ‘ತರುತಲವಾಸ ಕರತಲ ಭಿಕ್ಷಾ’ ರೀತಿಯ ಸನ್ಯಾಸಿಗಳು ನಾವಲ್ಲ’ ಎಂದು ಘೋಷಿಸಬಹುದು.

-ಎಲ್.ಆರ್.ಕಶ್ಯಪ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT