ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ವ್ಯಯಿಸುವ ವಾಹಕಗಳು

ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಕ್ಕೆ ನಾನು ಹೋಗಿದ್ದೆ. ವಿಶೇಷವೇನೂ ನೆನಪಾಗುತ್ತಿಲ್ಲ! ಕೃಷಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬರಬೇಕು ಎಂಬುದು ನಿರ್ಣಯ ಆಗಬೇಕೆಂದು ಎರಡು ಸಮ್ಮೇಳನಗಳಲ್ಲಿ ಯತ್ನಿಸಿ ಯಶಸ್ವಿಯಾಗಿದ್ದೆ (ಒಮ್ಮೆ ಹಾ.ಮಾ.ನಾಯಕರು ನನ್ನ ಕಾಗದವನ್ನು ವಿಷಯ ನಿಯಾಮಕ ಸಮಿತಿಯಲ್ಲಿ ಮಂಡಿಸಿ ಪಾಸ್ ಮಾಡಿಸಿದರು). ಈಗ ರಾಯಚೂರು, ಧಾರವಾಡದಲ್ಲೂ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಿವೆ. ಎಲ್ಲಿಯೂ ಪದವಿ ಮಟ್ಟದಲ್ಲಿ ಕನ್ನಡ ಮಾಧ್ಯಮ ಬಂದಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ಆಗಿದೆ. ನೂರನೇ ಸಮ್ಮೇಳನವೂ ನಡೆದೀತು. ಆದರೆ, ನಿರ್ಣಯಗಳು (ಅದೂ ಬಹಿರಂಗ ಅಧಿವೇಶನದಲ್ಲಿ ಚರ್ಚೆಯಿಲ್ಲದೆ) ಆಗಬೇಕೇ? ಆಗದಿದ್ದರೆ ಒಂದು ಕೊರತೆಯೇ? ಪರಿಷತ್ತು ಮತ್ತು ಅದರ ಘಟಕಗಳು ಸಮ್ಮೇಳನ ನಡೆಸಲು ಸರ್ಕಾರದ ಬಜೆಟ್ ವ್ಯಯಿಸಲು ವಾಹಕಗಳಷ್ಟೆ, ಅನುಷ್ಠಾನಕ್ಕೆ ಒತ್ತಾಯಿಸಲು ಏನು ಮಾಡಬಲ್ಲವು? ಹಾಗೆಯೇ ಚಲನಚಿತ್ರ ಅಕಾಡೆಮಿಯೂ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT