ಗುರುವಾರ , ನವೆಂಬರ್ 21, 2019
27 °C

ಚಂದ್ರಯಾನ–2: ಅತಿ ಪ್ರಚಾರದಿಂದ ಉಪಯೋಗವೇನು?

Published:
Updated:

ಚಂದ್ರಯಾನ–2ಕ್ಕೆ ಸಂಬಂಧಿಸಿದ ವರದಿಗಳನ್ನು ಓದಿದೆ. ‘ಕರ್ವಾಲೋ’ದ ಅಂತ್ಯ ನೆನಪಾಯಿತು. ಇದು ಯಾಗ (=ಯಜ್ಞ, ಭಗವತ್ ದರ್ಶನ) ಅಲ್ಲ. ರಾಷ್ಟ್ರೀಯ ಹಮ್ಮು ಎಂಬಂತೆ ಬಿಂಬಿತವಾದಾಗ ನಿರಾಸೆ ಹೆಚ್ಚು. ವಿಜ್ಞಾನಿಗಳನ್ನು ಅವರ ಕೆಲಸ ಮಾಡಲು ಬಿಡುವುದೊಳಿತು. ರಾಜಕಾರಣಿಗಳು, ಮಾಧ್ಯಮಗಳು ಅತಿ ಪ್ರಚಾರ ನೀಡಿ ಏನು ಉಪಯೋಗ? ಜನರಿಗೆ ನೇರವಾಗಿ ಸಹಾಯವಾಗುವ ಕಾರ್ಯಕ್ರಮಗಳಿಗೆ ಇಸ್ರೊ ಪ್ರಥಮ ಆದ್ಯತೆ ನೀಡಲಿ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರತಿಕ್ರಿಯಿಸಿ (+)