ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯವನ್ನು ಕಪಾಟಿನಲ್ಲಿಟ್ಟು ಬೀಗ ಹಾಕಲಾಗಿದೆ

Last Updated 29 ಜೂನ್ 2018, 16:29 IST
ಅಕ್ಷರ ಗಾತ್ರ

‘ಪಡಸಾಲೆ’ ಅಂಕಣದಲ್ಲಿ ರಘುನಾಥ ಚ.ಹ. ಮಂಡಿಸಿದ ವಾದವನ್ನು (ಪ್ರ.ವಾ., ಜೂನ್‌ 24) ಒಪ್ಪಲಾಗಲಿಲ್ಲ! ಏಕೆಂದರೆ ಮಕ್ಕಳ ಸಾಹಿತ್ಯ ಕೃಷಿ ಈಗಲೂ ಹುಲುಸಾಗಿದೆ. ನಾ. ಡಿಸೋಜ ಅವರಿಂದ ಹಿಡಿದು ಅಕ್ಬರ್ ಸಿ. ಕಾಲಿಮಿರ್ಚಿ ಅವರವರೆಗೆ ಅನೇಕ ಸಾಹಿತಿಗಳು ಈಗಲೂ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಕುವೆಂಪು, ರಾಜರತ್ನಂ ಅಂಥವರ ಸಮೃದ್ಧ ಕೃಷಿಯನ್ನು ಈಗಿನ ಮಕ್ಕಳು ಓದಬಾರದೆಂದೇನಿಲ್ಲವಲ್ಲ!

ಅಷ್ಟೇ ಏಕೆ, ಮಕ್ಕಳ ಸಾಹಿತ್ಯ ಸಂಸ್ಥೆಗಳು ಹಾಗೂ ಮಕ್ಕಳಸಾಹಿತ್ಯ ಪತ್ರಿಕೆಗಳು ಈಗಲೂ ಕ್ರಿಯಾಶೀಲವಾಗಿವೆ. ಈಗ ಕೇಳಬೇಕಾದ ಪ್ರಶ್ನೆ ಎಂದರೆ, ‘ನಮ್ಮ ಶಾಲೆಗಳಲ್ಲಿರುವಮಕ್ಕಳ ಗ್ರಂಥಾಲಯಗಳು ಬಳಕೆಯಾಗುತ್ತಿವೆಯೇ’ ಎಂದು.ಹೌದಲ್ಲವೆ? ನಮ್ಮ ಯಾವ ಶಾಲೆಯಲ್ಲೂ ಈಗ ಗ್ರಂಥಪಾಲಕರಿಲ್ಲ. ಹೀಗಾಗಿ ನಮ್ಮ ಸಮೃದ್ಧ ಮಕ್ಕಳ ಸಾಹಿತ್ಯವನ್ನು ಕಪಾಟಿನಲ್ಲಿಟ್ಟು ಬೀಗ ಹಾಕಲಾಗಿದೆ. ಅದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT