ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸಾಲು ಮರಗಳ ಸಂರಕ್ಷಿಸಿ

Last Updated 16 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆಯು ವಿವಿಧ ನಿಯಮಗಳನ್ನು ರೂಪಿಸುತ್ತದೆ. ಆದರೂ ಅಲ್ಲಲ್ಲಿ ಉಂಟಾಗುವ ತಾಂತ್ರಿಕ ತೊಂದರೆಗಳ ಕಡೆ ಹೆಚ್ಚು ಗಮನ ಹರಿಸದಿರುವುದು ವಿಪರ್ಯಾಸ. ಹಿಂದೆ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದವರಿಗೆ ರಸ್ತೆ ಬದಿಯಲ್ಲಿ ಇರುತ್ತಿದ್ದ ಸಾಲು ಸಾಲು ಗಿಡ, ಮರಗಳು ಖುಷಿ ಕೊಡುತ್ತಿದ್ದವು. ಇದರ ಹಿಂದೆ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರ ಕಾಳಜಿ ಕೆಲಸ ಮಾಡಿರುತ್ತಿತ್ತು.

ಈ ಮರಗಳಿಂದ ಸಾಕು ಪ್ರಾಣಿಗಳಿಗೆಂದು ಸೊ‍ಪ್ಪನ್ನು ಕಿತ್ತರೆ ಅಥವಾ ಸಣ್ಣಸಣ್ಣ ಒಣಗಿದ ಕೊಂಬೆಗಳನ್ನು ಉರುವಲಿಗಾಗಿ ಮುಟ್ಟಿದರೂ ಶಿಕ್ಷಿಸುವಂತಹ ನಿಗಾ ವ್ಯವಸ್ಥೆ ಇರುತ್ತಿತ್ತು. ಆದರೆ ಇತ್ತೀಚೆಗೆ ರಸ್ತೆಬದಿಯ ಮರಗಳ ಸಂರಕ್ಷಣೆಗೆ ಕಾಳಜಿ ವಹಿಸುವರ
ಸಂಖ್ಯೆ ಕ್ಷೀಣಿಸಿದೆ. ವಿದ್ಯುತ್ ಪೂರೈಕೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಅತಿ ಹೆಚ್ಚು ವಿದ್ಯುತ್‍ ಕಂಬಗಳನ್ನು ನೆಟ್ಟು, ಮರಗಳ ಸಮೀಪ ಹಳೆಯ ಮಾದರಿಯ ವಿದ್ಯುತ್ ಲೈನ್‍ಗಳು ಹಾದುಹೋಗುವಂತೆ ಮಾಡಲಾಗುತ್ತಿದೆ. ಇದರಿಂದ ಆ ಮರಗಳ ಬೆಳವಣಿಗೆಗೆ ಸಂಚಕಾರ ಉಂಟಾಗುತ್ತಿದೆ.

ನಗರ ಪ್ರದೇಶಗಳಲ್ಲಿ ಹಳೆಯ ವಿದ್ಯುತ್‍ ಲೈನ್‍ಗಳಿಗೆ ಇತಿಶ್ರೀ ಹೇಳಿ, ಆಧುನಿಕ ಮಾದರಿಯ ಸುರಕ್ಷಿತ
ವಿದ್ಯುತ್‍ ಲೈನ್‍ಗಳನ್ನು ಅಳವಡಿಸಲಾಗುತ್ತಿದೆ. ಈ ಸೌಲಭ್ಯವನ್ನು ಗ್ರಾಮೀಣ ಭಾಗಗಳಿಗೂ ಜರೂರಾಗಿ ವಿಸ್ತರಿಸಿ ಸಾಲು ಮರಗಳ ಸಂರಕ್ಷಣೆಗೆ ಗಮನ ಹರಿಸಬೇಕು.

ಮಹದೇವಪ್ಪ.ಪಿ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT