ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ಟಮ್ಸ್‌ ಅಧಿಕಾರಿಗಳ ಕೈಚಳಕ

Last Updated 8 ಮಾರ್ಚ್ 2021, 17:19 IST
ಅಕ್ಷರ ಗಾತ್ರ

ಕಸ್ಟಮ್ಸ್ ಅಧಿಕಾರಿಗಳು ತೀವ್ರತರ ಪರಿಶೋಧನೆ ಮಾಡುತ್ತಾರೆ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ಭಟ್ಕಳದ ವ್ಯಕ್ತಿಯೊಬ್ಬರ ₹ 48 ಲಕ್ಷ ಮೌಲ್ಯದ ಕೈಗಡಿಯಾರವನ್ನು ಚಿನ್ನ ಅಡಗಿಸಿಟ್ಟು ಸಾಗಿಸುತ್ತಿದ್ದರೆಂಬ ಅನುಮಾನದ ಮೇಲೆ ಕೇರಳದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಒಡೆದು ಹಾಕಿರುವುದೇ (ಪ್ರ.ವಾ., ಮಾರ್ಚ್‌ 8) ಇದಕ್ಕೆ ನಿದರ್ಶನ!

ಆದರೂ ಕೈ ಗಡಿಯಾರದಲ್ಲಿ ಎಷ್ಟು ಬಂಗಾರ ಇಡಬಹುದು ಹಾಗೂ ಈ ವಾಚು ಬೇರೆ ವಾಚಿಗಿಂತ ಎಷ್ಟು ಹೆಚ್ಚು ಮೌಲ್ಯದ್ದು ಎಂಬ ಸಾಮಾನ್ಯ ಜ್ಞಾನವೂ ಈ ಅಧಿಕಾರಿಗಳಿಗೆ ಇಲ್ಲದಿದ್ದುದು ಬಯಲಾಗಿದೆ. ವಾಚಿನ ಒಳಗೆ ಇರಬಹುದಾದ ಚಿನ್ನವನ್ನು ಆ ವಾಚನ್ನು ಒಡೆದುಹಾಕಿಯೇ ಪರಿಶೀಲಿಸಬೇಕೇ? ಅದನ್ನು ಪುಡಿಮಾಡುವ ಅಗತ್ಯವೇನಿತ್ತು? ಅಧಿಕಾರಿಗಳು ಇನ್ನು ಮುಂದಾದರೂ ಇಂತಹ ಇಕ್ಕಟ್ಟಿಗೆ ಸಿಲುಕದೆ ಮುಂದಾಲೋಚಿಸಿ ಕಾರ್ಯ ನಿರ್ವಹಿಸುವುದು ಒಳ್ಳೆಯದು.

ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT