ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಮುಖ್ಯಮಂತ್ರಿ ಹುದ್ದೆಗೆ ವಿಶೇಷ ಮಹತ್ವ ಇಲ್ಲ

Last Updated 11 ಜೂನ್ 2019, 4:29 IST
ಅಕ್ಷರ ಗಾತ್ರ

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ಐವರು ಉಪಮುಖ್ಯಮಂತ್ರಿಗಳನ್ನು ನೇಮಿಸಿದ್ದಾರೆ (ಪ್ರ.ವಾ., ಜೂನ್‌ 9). ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದು ರಾಜಕೀಯ ಕಾರಣಗಳಿಗಾದರೂ, ಕೆಲವೊಮ್ಮೆ ಸಂದರ್ಭಗಳು ಈ ಹುದ್ದೆಯ ಸೃಷ್ಟಿಗೆ ಕಾರಣವಾಗಬಲ್ಲವು.

ಒಟ್ಟಾರೆ, ದೇಶದ ಎಂಟು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿಗಳಿದ್ದಾರೆ. ಆದರೆ ಒಂದೇ ರಾಜ್ಯದಲ್ಲಿ ಐವರು ಉಪಮುಖ್ಯಮಂತ್ರಿಗಳಿರುವುದು ಇದೇ ಮೊದಲು. ಮುಖ್ಯಮಂತ್ರಿ ಹುದ್ದೆಗಾಗಿ ಪ್ರಬಲ ಸ್ಪರ್ಧೆ ಇದ್ದರೆ, ಅವರ ಪೈಕಿ ಒಬ್ಬರನ್ನು ಮುಖ್ಯಮಂತ್ರಿಯಾಗಿ; ಒಂದಿಬ್ಬರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಬಹುದು. ಪ್ರಾಂತ್ಯವಾರು ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡಲು ಸಹ ಈ ರೀತಿಯ ನೇಮಕ ನಡೆಯುತ್ತದೆ.

ಹಿಂದೆ ರಾಜ್ಯದಲ್ಲಿ ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆರಾಜೀನಾಮೆ ನೀಡಿದಾಗ, ಆ ಸ್ಥಾನಕ್ಕೆ ವೀರಪ್ಪ ಮೊಯಿಲಿ ಹಾಗೂ ಎಸ್.ಎಂ.ಕೃಷ್ಣ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಆಗ ಕಾಂಗ್ರೆಸ್‌ ಹೈಕಮಾಂಡ್, ಮೊಯಿಲಿ ಅವರ ಹೆಸರನ್ನು ಅಂತಿಮಗೊಳಿಸಿತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಕೃಷ್ಣ ಅವರನ್ನು ಸಮಾಧಾನಪಡಿಸಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿತು.

ಅಂದು ರಾಜ್ಯದಲ್ಲಿ ಸೃಷ್ಟಿಯಾದ ಉಪ ಮುಖ್ಯಮಂತ್ರಿ ಹುದ್ದೆಯು ಮುಂದೆ ಅನೇಕ ಸಂದರ್ಭಗಳಲ್ಲಿ ಮುಂದುವರಿಯಿತು. ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ನಮ್ಮ ಸಂವಿಧಾನದಲ್ಲಿ ಉಲ್ಲೇಖ ಇಲ್ಲದೇ ಹೋದರೂ ಇದೊಂದು ಸಂಪ್ರದಾಯವಾಗಿ ಬೆಳೆದುಬಂದಿದೆ. ಪ್ರಸ್ತುತ ಮೈತ್ರಿ ಸರ್ಕಾರದಲ್ಲಿ ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಸಚಿವ ಸಂಪುಟದಲ್ಲಿ ಅವರಿಗೆ ಎರಡನೇ ಸ್ಥಾನವಿದ್ದರೂ ಉಪಮುಖ್ಯಮಂತ್ರಿಗೆ ಯಾವುದೇ ವಿಶೇಷ ಅಧಿಕಾರ ಇರುವುದಿಲ್ಲ.

ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT