ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಹಿರಿಯರ ಕಡೆಗಣನೆ ಸಲ್ಲ

Last Updated 17 ಮೇ 2020, 19:12 IST
ಅಕ್ಷರ ಗಾತ್ರ

‘ಹಿರಿಯರು ತಮ್ಮದೇ ಎಲ್ಲಾನಡೆಯಬೇಕು ಎನ್ನುವ ಅಹಂ ಬಿಟ್ಟು, ಕಾಲ, ಸಂದರ್ಭಗಳಿಗೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು. ಆಗ ಸಂಸಾರದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಟಿ.ಎಸ್. ಪ್ರತಿಭಾ ಹೇಳಿದ್ದಾರೆ (ವಾ.ವಾ., ಮೇ 16). ಮನೆಯಲ್ಲಿ ಹಿರಿಯರು ಇರಬೇಕು ಮತ್ತು ಅವರ ಅನುಭವಗಳು ನಮಗೆದಾರಿದೀಪವಾಗಬೇಕು. ಎಲ್ಲವೂ ಕಿರಿಯರಿಗೇ ಗೊತ್ತು ಎಂಬುದು ಶೈಕ್ಷಣಿಕವಾಗಿ ಒಪ್ಪಬಹುದಾದರೂ ಅನುಭವದ ವಿಚಾರದಲ್ಲಿ ಅಲ್ಲ. ಕಿರಿಯರು ತಪ್ಪು ದಾರಿಯಲ್ಲಿ ಸಾಗುತ್ತಿದ್ದರೂ ಅವರನ್ನು ಎಚ್ಚರಿಸುವುದು ತಮ್ಮಂತೆ ನಡೆಯಬೇಕು ಅಂತಲ್ಲ, ಮುಂದೆ ಅನಾಹುತ ಆಗದಿರಲಿ ಅಂತ.

ಎಷ್ಟೇ ಆದರೂ ಕಿರಿಯರಿಗಿಂತ ಹಿರಿಯರಲ್ಲಿ ಜೀವನಾನುಭವ ಹೆಚ್ಚು. ಅವರ ಮಾತುಗಳಿಂದ ಬಿಸಿರಕ್ತದ ಯುವಜನರಿಗೆ ಕಿರಿಕಿರಿ ಆಗಬಹುದಾದರೂ ನಿಧಾನಿಸಿ ಯೋಚಿಸಿದಾಗ ಅದು ಸರಿಯೆನಿಸುತ್ತದೆ. ಇಂದಿನ ಅನೇಕರಿಗೆ ತಾಳ್ಮೆಯೂ ಇಲ್ಲ, ಆಲಿಸುವ ವ್ಯವಧಾನವೂ ಇಲ್ಲ, ಮುಂದಾಲೋಚನೆಗೆ ಸಮಯವೂ ಇಲ್ಲ. ಇದೇ ಅನಾಹುತಗಳಿಗೆ ದಾರಿ. ಹಿರಿಯರ ಮಾತುಗಳನ್ನು ಅಹಂ ಎಂದು ಪರಿಗಣಿಸದೆ ತಾಳ್ಮೆ ವಹಿಸಿ ಪರಾಮರ್ಶಿಸುವುದು ಉತ್ತಮ ನಡೆ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT