ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಎಚ್ಚೆತ್ತುಕೊಳ್ಳಬೇಕಾದ ಜರೂರಿದೆ

ಅಕ್ಷರ ಗಾತ್ರ

ರಾಜ್ಯದಲ್ಲಿ 14 ವರ್ಷದೊಳಗಿನ ಹತ್ತು ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗೆ ಉಳಿದಿರುವುದು (ಪ್ರ.ವಾ., ಜುಲೈ 7) ಆಘಾತಕಾರಿ ಸಂಗತಿ. ಯಾವುದೇ ದೇಶದ, ಜನರ ಸ್ಥಿತಿ ಅರಿಯಲು ಮೊದಲ ಮಾನದಂಡ ಶಿಕ್ಷಣ. ಆದರೆ ನಮ್ಮಲ್ಲಿ ಶಿಕ್ಷಣದ ಬಗ್ಗೆ ಇತ್ತೀಚೆಗೆ ಮತ್ತು ಕೊರೊನಾ ನಂತರದ ದಿನಮಾನಗಳಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಚಿಂತೆಗೆ ಹಚ್ಚುತ್ತಿವೆ. ಶಿಕ್ಷಣವು ವರಮಾನ ತರುವಂಥದ್ದಲ್ಲ, ಕೇವಲ ವೆಚ್ಚದ ಬಾಬತ್ತು ಎಂದೇ ನಮ್ಮ ರಾಜಕಾರಣಿಗಳು ಭಾವಿಸಿದ್ದಾರೆ. ನಾವು ಎಚ್ಚೆತ್ತುಕೊಳ್ಳಬೇಕಾದ ಜರೂರು ಇರುವುದು ಈ ವರದಿಯಿಂದ ತಿಳಿಯುತ್ತದೆ.

ಸದ್ಯ ಓದುತ್ತಿರುವ ಮಕ್ಕಳು ಸಹ ಕೊರೊನಾ ಕಾರಣದಿಂದ ಎರಡು ವರ್ಷ ಕಲಿಕೆಯಿಂದ ವಂಚಿತರಾಗಿದ್ದರು. ಅವರ ಕಲಿಕೆಯ ಮಟ್ಟವನ್ನು ಉತ್ತಮಗೊಳಿಸುವುದರ ಜೊತೆಗೆ ಶಾಲೆಯಿಂದ ಹೊರಗುಳಿದ ಮತ್ತು ಶಾಲೆಗಳಲ್ಲಿ ಇಂದಿಗೂ ಪ್ರವೇಶ ಪಡೆಯದ ಮಕ್ಕಳನ್ನು ಶಾಲೆಗಳಿಗೆ ಕರೆತರಬೇಕಾಗಿದೆ.

ಈ ದಿಸೆಯಲ್ಲಿ ತುರ್ತು ಕಾರ್ಯಯೋಜನೆ ರೂಪಿಸಿ ಜಾರಿಗೆ ತರಬೇಕಿದೆ. ಬೇರೆಲ್ಲಕ್ಕಿಂತ ಶಿಕ್ಷಕರನ್ನು ಸೈನಿಕರಂತೆ ಸಿದ್ಧಪಡಿಸಿದರೆ ನಿಶ್ಚಿತ ಗುರಿ ತಲುಪಲು ಸಾಧ್ಯ. ಯಾವ ಮಗುವೂ ಶಾಲೆಯಿಂದ ಹೊರಗೆ ಉಳಿಯಬಾರದು ಎಂಬ ಮನೋಭಾವ ಸಮಾಜ, ಸರ್ಕಾರ, ಶಿಕ್ಷಕರು ಎಲ್ಲರದ್ದೂ ಆಗಬೇಕು. ಅಂದಾಗ ಮಾತ್ರ ಶಿಕ್ಷಣವು ತನ್ನ ಪಾತ್ರವನ್ನು ಸರಿಯಾಗಿ ನಿಭಾಯಿಸಲು ಸಾಧ್ಯ.

⇒ಬಿ.ಆರ್.ಅಣ್ಣಾಸಾಗರ,ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT