ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿಗೂ ಇದೆ ‘ಇಂಗ್ಲಿಷ್‌ ಕಾಟ’

Last Updated 6 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಇಂದಿಗೂ ಇದೆ ‘ಇಂಗ್ಲಿಷ್‌ ಕಾಟ’

ಶಿವಮೊಗ್ಗ, ಬೆಂಗಳೂರು ಮುಂತಾದ ನಗರಗಳ ಹೆಸರುಗಳನ್ನು ಇತ್ತೀಚಿನವರೆಗೆ ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದಾಗ ಉಪಯೋಗಿಸುತ್ತಿದ್ದ ವಿಭಿನ್ನ ಪದ ರೂಪಗಳನ್ನು ಜನರು ಒಪ್ಪಿಕೊಂಡು ಬಳಸುತ್ತಿದ್ದ ರೀತಿಯನ್ನು ಗಿರೀಶ್‌ ಮತ್ತೇರ ಅವರು ಪ್ರಸ್ತಾಪಿಸಿದ್ದಾರೆ (ವಾ.ವಾ., ಫೆ. 4). ಕನ್ನಡ ಲಿಪಿ ಸುಧಾರಣೆ ಕುರಿತ ಚರ್ಚೆಯು ಇಂಗ್ಲಿಷ್‌ನತ್ತ ಗಮನ ಹರಿಸುವಂತೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ‘ಅಣ್ಣನ ನೆನಪು’ ಪುಸ್ತಕದಲ್ಲಿ ಬರೆದ ‘ಇಂಗ್ಲಿಷ್‌ ಕಾಟ’ ಲೇಖನ ಜ್ಞಾಪಕಕ್ಕೆ ಬಂದಿತು. ಅದರಲ್ಲಿ ತಾವು ಮತ್ತು ತಮ್ಮ ಮಿತ್ರರು ಬಿ.ಎ. ಇಂಗ್ಲಿಷ್‌ ಭಾಷಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆಗಳನ್ನು ತೇಜಸ್ವಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಬರವಣಿಗೆಗೂ ಆಡುವ ಭಾಷೆಗೂ ಇರುವ ವ್ಯತ್ಯಾಸ ಅವರಲ್ಲಿ ಮತ್ತು ಮಿತ್ರರಲ್ಲಿ ಮೂಡಿಸಿದ ಗೊಂದಲ ಇಂದಿಗೂ ವಿದ್ಯಾರ್ಥಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ. ‘ಎಲ್ಲರ ಕನ್ನಡ’ದ ಬಗ್ಗೆ ಪರ- ವಿರೋಧದ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಇಂಗ್ಲಿಷ್‌ ಭಾಷೆಯ ಈ ಅಂಶದ ಬಗ್ಗೆಯೂ ನಾವು ಗಮನಹರಿಸಬೇಕಾಗುತ್ತದೆ.

-ಡಾ. ಎಂ.ರವೀಂದ್ರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT