ಬಡ್ಡಿಸಹಿತ ಕೂಲಿ ಕೊಡಿ

7

ಬಡ್ಡಿಸಹಿತ ಕೂಲಿ ಕೊಡಿ

Published:
Updated:

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಮೂರು ವರ್ಷವಾದರೂ ಕೂಲಿಯ ಹಣವನ್ನು ಪಾವತಿಸದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ
(ಪ್ರ.ವಾ., ಆ. 8).

ಬರದಿಂದ ತತ್ತರಿಸಿರುವ ಮತ್ತು ಉದ್ಯೋಗವೂ ಇಲ್ಲದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಕಾಲವಾದರೂ ಉದ್ಯೋಗ ಕೊಡುವ ಈ ಯೋಜನೆಯು ಉದ್ದೇಶ ಸಾಧನೆಯಲ್ಲಿ ವಿಫಲವಾಗುತ್ತಿರುವುದು ಕಂಡುಬರುತ್ತಿದೆ.

ಅಂದಂದು ದುಡಿದು ತಂದ ಹಣದಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುವ ಕೂಲಿಕಾರರಿಗೆ ಕೆಲಸ ಮುಗಿಸಿ ಮೂರು ವರ್ಷಗಳಾದರೂ ಕೂಲಿ ಕೊಟ್ಟಿಲ್ಲ ಎಂದರೆ ಹೇಗೆ? ಕೂಲಿಗಾಗಿ ತಿಂಗಳಾನುಗಟ್ಟಲೆ ಪಂಚಾಯಿತಿ ಬಾಗಿಲಿಗೆ ಅಲೆದಾಡಿಸಿದರೆ ಬಡವರ ಪಾಡೇನು?

ಕೂಲಿಯ ಹಣ ಪಾವತಿಸುವಲ್ಲಿ ಆಗಿರುವ ವಿಳಂಬವನ್ನು ‘ಆಡಳಿತ ಯಂತ್ರದ ಲೋಪ’ ಎಂದು ಪರಿಗಣಿಸಿ, ಕಾರ್ಮಿಕರಿಗೆ ಬಡ್ಡಿಸಹಿತವಾಗಿ ಕೂಲಿಯನ್ನು ಪಾವತಿಸಬೇಕು ಮತ್ತು ಹೀಗೆ ಬಡ್ಡಿಯ ರೂಪದಲ್ಲಿ ಕೊಡುವ ಹಣವನ್ನು ಸಂಬಂಧಪಟ್ಟ ಅಧಿಕಾರಿಗಳ ವೇತನದಿಂದ ಕಡಿತ ಮಾಡಿಕೊಳ್ಳಬೇಕು. ಇಂಥ ಕ್ರಮ ಕೈಗೊಂಡರೆ ಮಾತ್ರ ಬಡ ಕಾರ್ಮಿಕರಿಗೆ ಆಗುವ ಅನ್ಯಾಯವನ್ನು ತಡೆಯಬಹುದು.

ಆನಂದ ಎನ್.ಎಲ್., ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !