ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಮುದ್ರಣದಲ್ಲಿ ಉದಾಸೀನ

ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳಿಗೆ ಹಿಂದಿನ ಸಾಲಿನ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಳೆಯ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಕೊಳಕಾದ ಹರಿದ ಪುಸ್ತಕಗಳು ಇದರಲ್ಲಿ ಸೇರಿವೆ. ಉಚಿತವೆಂದು ಒಮ್ಮೆ ವಿತರಣೆ ಮಾಡಿದ ಪುಸ್ತಕಗಳನ್ನು ವಾಪಸ್‌ ಪಡೆದುಕೊಂಡರೆ ಉಚಿತ ಎನ್ನುವ ಪದಕ್ಕೆ ಇರುವ ಅರ್ಥವಾದರೂ ಏನು? ಪಠ್ಯಪುಸ್ತಕ ವಿತರಣೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸದಿರುವುದು ಎಷ್ಟು ಸರಿ? ಕೋವಿಡ್ ಹಾವಳಿಯ ನಡುವೆ ಶಾಲೆಗಳು ಆರಂಭವಾಗದಿದ್ದ ಕಾರಣ ಪಠ್ಯಪುಸ್ತಕಗಳನ್ನು ಮುದ್ರಿಸಲು ಬಹಳಷ್ಟು ಸಮಯ ದೊರೆತಿದ್ದರೂ ಈ ವಿಷಯದಲ್ಲಿ ಉದಾಸೀನ ತಳೆದಿದ್ದು ಸ್ಪಷ್ಟವಾಗಿದೆ.

‘ಪುಸ್ತಕ ಕೊಡೂದು ಲೇಟಾಗುತ್ತೆ ಅಂತ ಹಳೆಪುಸ್ತಕ ಈಸ್ಕತಾ ಇದ್ದೀರಲ್ಲ ಸ್ವಾಮಿ, ಯೂನಿಪಾರಮ್ಮು ಕೊಡೂದು ಲೇಟ್ ಆದ್ರೆ ಹಳೆ ಯೂನಿಪಾರಮ್ ಏನಾದ್ರು ಬಿಚ್ಚಿಸ್ಕಂಡು ವಾಪಸ್ ಕೊಡ್ಬೇಕ?’– ಇಂಥ ಹಳೆಯ ಪುಸ್ತಕ ವಾಪಸ್ ಮಾಡಿ ಬರುತ್ತಿದ್ದ ಪೋಷಕರೊಬ್ಬರು ಹೇಳಿದ ಈ ಮಾತು ತಮಾಷೆಯೆನಿಸಿದರೂ ಮಾರ್ಮಿಕವಾಗಿದೆ.

- ಪುಟ್ಟದಾಸು,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT