ಒಗ್ಗೂಡಿ ಹೋರಾಡೋಣ

7

ಒಗ್ಗೂಡಿ ಹೋರಾಡೋಣ

Published:
Updated:

ಹಿಂದಿ ಹೇರಿಕೆ ವಿರುದ್ಧ ಒಗ್ಗೂಡಿ ಧ್ವನಿ ಎತ್ತುವ ಉದ್ದೇಶದಿಂದ ದ್ರಾವಿಡ ಭಾಷೆಗಳ ಸಮ್ಮೇಳನ ನಡೆಸುವ ನಿರ್ಧಾರ (ಪ್ರ.ವಾ., ಆ. 1) ಸರಿಯಾದುದು. ಹಿಂದಿಯು ಇನ್ನಿತರ ಅಧಿಕೃತ ಭಾಷೆಗಳಂತೆ ಒಂದು ಭಾಷೆಯೆಂದೂ, ರಾಷ್ಟ್ರ ಭಾಷೆಯಲ್ಲವೆಂದೂ ಯಾರು ಎಷ್ಟೇ ಹೇಳಿದರೂ ಹಿಂಬಾಗಿಲ ಮೂಲಕ ಅದನ್ನು  ಹೇರುವ ಪ್ರಯತ್ನಗಳು ನಡೆದೇ ಇವೆ.

ಹಿಂದಿ ಚಲನಚಿತ್ರ, ಗೀತೆಗಳನ್ನು ಹೇರಳವಾಗಿ ಪ್ರದರ್ಶಿಸುವುದು– ಕೇಳಿಸುವುದು, ದಕ್ಷಿಣದ ಉದ್ಯಮಗಳಲ್ಲಿ ಹಿಂದಿ ಭಾಷಿಕರಿಗೆ ನೀಡುತ್ತಿರುವ ಪ್ರಾಧಾನ್ಯ, ಕೇಂದ್ರ ಸರ್ಕಾರ ಪ್ರಾಯೋಜಿತ ಸೇವಾ ಪರೀಕ್ಷೆಗಳಲ್ಲಿ ಹಿಂದಿಗೆ ನೀಡುತ್ತಿರುವ ಪ್ರಾಧಾನ್ಯ, ಪಠ್ಯಪುಸ್ತಕಗಳಲ್ಲಿ ಹಿಂದಿ ನಾಡಿನ ಸಾಧಕರ ವಿಷಯಗಳನ್ನೇ ಪ್ರಚಾರ ಮಾಡುವುದು, ದೂರದರ್ಶನದಲ್ಲಿ ಹಿಂದಿ ಪ್ರದೇಶದ ವಿಷಯಗಳಿಗೇ ಒತ್ತು ನೀಡುವುದು... ಇಂತಹ ಆಟಗಳು ನಿತ್ಯನಿರಂತರ ಎಂಬಂತಾಗಿವೆ. ಒಗ್ಗೂಡಿ ಹೋರಾಡುವುದರಿಂದ ಮಾತ್ರ ಇದನ್ನು ತಡೆಯಲು ಸಾಧ್ಯ.

ಬೆಂಗಳೂರು

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !