ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಾದರಿ ಅಂಗನವಾಡಿ: ಸುಧಾರಣೆ ಮುಖ್ಯ

Last Updated 9 ನವೆಂಬರ್ 2022, 19:30 IST
ಅಕ್ಷರ ಗಾತ್ರ

ರಾಜ್ಯದ ಕೆಲವು ಅಂಗನವಾಡಿಗಳಲ್ಲಿ 65 ಇಂಚಿನ ಸ್ಮಾರ್ಟ್‌ ಟಿ.ವಿ.ಯನ್ನು ನೀಡಲಾಗಿದೆ. ಜೊತೆಗೆ ಅದಕ್ಕೆ ವೆಬ್‌ಕ್ಯಾಮೆರಾವನ್ನೂ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ₹ 2 ಲಕ್ಷಕ್ಕಿಂತ ಅಧಿಕ. ಕಲಿ– ನಲಿ ಕಾರ‍್ಯಕ್ರಮದ ಕೆಲವು ಪಠ್ಯಗಳನ್ನು ಸೇರಿಸಿ, ಕನ್ನಡ- ಇಂಗ್ಲಿಷ್ ಅನುವಾದದ ಬೋಧನಾ ಪರಿಕರಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗಿದೆ. ಶಿಕ್ಷಕಿಯರೇ ಇಲ್ಲದ ಕೆಲವು ಅಂಗನವಾಡಿಗಳಲ್ಲಿ ಆಯಾಗಳೇ ಟಿ.ವಿಯನ್ನು ಮಕ್ಕಳಿಗೆ ತೋರಿಸುತ್ತಾ ಸಮಯ ಕಳೆಯುತ್ತಾರೆ. ಅಂಗನವಾಡಿಗೆ ಮೊದಲು ಬೇಕಿರುವುದು ನುರಿತ ಶಿಕ್ಷಕಿಯರು. ಮಕ್ಕಳ ಎಳೆ ಬೆರಳುಗಳ ಮೂಲಕ ಅವರ ಬುದ್ಧಿಯನ್ನು ಪ್ರಚೋದಿಸುವ ಶೈಕ್ಷಣಿಕ ಪದ್ಧತಿ. ಒಂದೆಡೆ, ನಿವೃತ್ತ ಶಿಕ್ಷಕಿಯರನ್ನೇ ಎರಡು ಮೂರು ಶಾಲೆಗಳಿಗೆ ಬಳಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ, ಹೊಸಬರಿಗೆ ಸಕಾಲದಲ್ಲಿ ಸಂಬಳವೇ ಇಲ್ಲದಂತಾಗಿದೆ.

ಟಿ.ವಿ., ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುವ ಮಾನಸಿಕ, ದೈಹಿಕ ದುಷ್ಪರಿಣಾಮಗಳ ಬಗೆಗೆ ಅಸಂಖ್ಯ ಸಂಶೋಧನೆಗಳು ನಡೆದಿವೆ. ಆದಾಗ್ಯೂ ಮನೆ- ಶಾಲೆ ಎರಡೂ ಕಡೆ ಮತ್ತೆ ಟಿ.ವಿ ಪರದೆ ಬಳಕೆ ಅವೈಜ್ಞಾನಿಕ. ಬುದ್ಧಿ ಬಲಿಯುತ್ತಿರುವ ವಯಸ್ಸಿನ ಮಕ್ಕಳ ಕೌಶಲವೃದ್ಧಿಗೆ ಅನುವಾಗಬೇಕಾದ ಅಂಗನವಾಡಿಯನ್ನು ಸಮರ್ಥವಾಗಿ ಬಳಸಿದರೆ, ಮಕ್ಕಳ ಮುಂದಿನ ಶೈಕ್ಷಣಿಕ ಕಲಿಕೆ ಉತ್ತಮಗೊಳ್ಳುತ್ತದೆ. ಕಾರ್ಪೊರೇಟ್ ದೇಣಿಗೆ ಸಹಾಯದಿಂದ ಮಾದರಿ ಅಂಗನವಾಡಿ ಸೃಷ್ಟಿಸುವುದು ಸ್ಮಾರ್ಟ್‌ ಟಿ.ವಿ ನೀಡಿಕೆಗಷ್ಟೇ ಸೀಮಿತವಾಗದೆ, ಒಟ್ಟಾರೆ ಅಂಗನವಾಡಿ ವ್ಯವಸ್ಥೆಯ ಸುಧಾರಣೆಗೆ ಗಮನ ಹರಿಸುವಂತೆ ಇರಬೇಕು. ಆಗಷ್ಟೇ ಭವ್ಯ ಭಾರತದ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ.

‌–ಡಾ. ಶಾಂತರಾಜು ಎಸ್‌., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT