ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಇಲಾಖೆಯ ಅವನತಿ

Last Updated 6 ಡಿಸೆಂಬರ್ 2019, 17:49 IST
ಅಕ್ಷರ ಗಾತ್ರ

ಹಲವು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಕೇಂದ್ರ ಸರ್ಕಾರ ತುದಿಗಾಲ ಮೇಲೆ ನಿಂತಂತೆ ತೋರುತ್ತಿದೆ. ಅಂಚೆ ಮತ್ತು ತಂತಿ ಇಲಾಖೆಯ ‘ತಂತಿ’ಯನ್ನು ಕತ್ತರಿಸಿ ವರ್ಷಗಳೇ ಉರುಳಿದವು. ಬಿಎಸ್‍ಎನ್‍ಎಲ್ ಅವನತಿಯ ಹಾದಿಯಲ್ಲಿದೆ. ಅಂಚೆ ಇಲಾಖೆಯೂ ಅದೇ ಹಾದಿಯಲ್ಲಿ ಸಾಗುತ್ತಿದೆ. ನಾಲ್ಕು ವರ್ಷಗಳಿಂದ ನನಗೆ ಅಂಚೆ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲವೆಂದು ಅಂಚೆ ಅಧೀಕ್ಷಕರಿಗೆ ದೂರು ನೀಡಿದ್ದಾಯಿತು, ಪುನರಪಿ ಅಂಚೆ ಅಧಿಕಾರಿಗಳ ಬಳಿಗೆ ಅಲೆದಾಡಿದ್ದೇ ಬಂತು. ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ‘ಪತ್ರಗಳು ಬಂದರೆ ತಂದುಕೊಡುತ್ತೇವೆ, ಬರದಿದ್ದಲ್ಲಿ ಎಲ್ಲಿಂದ ತರುವುದು?’ ಎಂದು ಅಂಚೆಯಣ್ಣ‘ಪ್ರಾಮಾಣಿಕ’ವಾಗಿ ಪ್ರಶ್ನಿಸುತ್ತಾರೆ.

ಪರೀಕ್ಷಿಸುವ ಸಲುವಾಗಿ ನಾನೇ ಅಂಚೆ ಪೆಟ್ಟಿಗೆಗೆ ಹಾಕಿದ ಪತ್ರಗಳೂ ತಲುಪಿಲ್ಲ. ಮಧ್ಯಾಹ್ನ 3 ಗಂಟೆ ನಂತರ ನೋಂದಾಯಿತ ಅಂಚೆ ಸ್ವೀಕರಿಸುವುದಿಲ್ಲ ಎನ್ನುವ ಮಾತು, ಈ ಎಲೆಕ್ಟ್ರಾನಿಕ್‌ ಯುಗದಲ್ಲೂ ಕೇಳಿಬರುತ್ತದೆ. ಅಂಚೆ ಸಿಬ್ಬಂದಿ ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿಬಿಟ್ಟರೆ ಜನಸಾಮಾನ್ಯರನ್ನು ಸೆಳೆಯಲು ಸಾಧ್ಯವಿಲ್ಲ. ಶೀಘ್ರ– ವಿಶ್ವಾಸಾರ್ಹ ಸೇವೆಯನ್ನು ಆಧುನಿಕ ಸ್ಪರ್ಶದೊಂದಿಗೆ ನೀಡಿ, ಗ್ರಾಹಕರನ್ನು ಸೆಳೆಯುವತ್ತ ಇಲಾಖೆ ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT