ಭಾನುವಾರ, ಫೆಬ್ರವರಿ 23, 2020
19 °C

ದೂರವಾಗುತ್ತಿರುವ ಗ್ರಾಹಕರು

ಶಾಂತವೀರ ಎಸ್. ಚಿತ್ರದುರ್ಗ Updated:

ಅಕ್ಷರ ಗಾತ್ರ : | |

ಅಂಚೆ ಸೇವೆಗೆ ಸಂಬಂಧಿಸಿದ ದೂರು, ಕುಂದುಕೊರತೆ ಬಗೆಹರಿಸಲು ಅಂಚೆ ಇಲಾಖೆಯು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಅಂಚೆ ಅದಾಲತ್‌ಗೆ ಒಬ್ಬ ಗ್ರಾಹಕರೂ ಹಾಜರಾಗಲಿಲ್ಲ ಎಂದು ವರದಿಯಾಗಿದೆ (ಪ್ರ.ವಾ., ಡಿ. 3). ನಾನು ಒಂದು ಬಾರಿ ಅಂಚೆ ಕಚೇರಿಗೆ ಹೋಗಿ ಅಂಚೆ ಎಂಐಎಸ್‌ನಲ್ಲಿ ಹಣ ತೊಡಗಿಸಲು ಚೆಕ್ ನೀಡಿದಾಗ, ಏನೇನೋ ಅಸಂಬದ್ಧ ಕಾರಣ ಹೇಳಿ ಸ್ವೀಕರಿಸಲಿಲ್ಲ. ಅದೇ ಹಣವನ್ನು ಬೇರೆ ಬ್ಯಾಂಕ್‌ನಲ್ಲಿ ತೊಡಗಿಸಿದೆ. ಇದೊಂದು ಸಣ್ಣ ಉದಾಹರಣೆ ಅಷ್ಟೆ.

ಈ ಸ್ಪರ್ಧಾತ್ಮಕ ಕಾಲದಲ್ಲಿ ಅಂಚೆ ಇಲಾಖೆಯು ಗ್ರಾಹಕಸ್ನೇಹಿ ಆಗುವ ನಿಟ್ಟಿನಲ್ಲಿ ನಿರೀಕ್ಷಿಸಿದಷ್ಟು ಪ್ರಯತ್ನವನ್ನೇ ಮಾಡುತ್ತಿಲ್ಲ. ಇಲಾಖೆಯ ಸೇವೆಗಳಿಂದ ದೂರವಾಗುತ್ತಿರುವ ಗ್ರಾಹಕರು ಇನ್ನು ದೂರು ಕೊಡುವ ಮಾತೆಲ್ಲಿ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)