ಬೌದ್ಧಿಕ ದಾರಿದ್ರ್ಯ...!

7

ಬೌದ್ಧಿಕ ದಾರಿದ್ರ್ಯ...!

Published:
Updated:

ಕನ್ನಡಿಗರ ಬೌದ್ಧಿಕ ದಾರಿದ್ರ್ಯ ಹೆಚ್ಚಾಗುತ್ತಿದೆಯೇ? ಜಾತಿ, ಹಣ, ಮದ್ಯದ ಆಮಿಷಗಳಿಗೆ ಒಳಗಾಗಿ ವೋಟು ಹಾಕುವ ಜನರ ಮನಸ್ಥಿತಿಯನ್ನು ನೋಡಿದರೆ ಹಾಗೆ ಅನ್ನಿಸುತ್ತಿದೆ. ಅಕ್ಷರಜ್ಞಾನ ಹೆಚ್ಚಾಗಿದ್ದರೂ ನಮ್ಮ ಜನರ ವಿಚಾರಬುದ್ಧಿ ಸುಧಾರಿಸುತ್ತಿಲ್ಲ. ಇದನ್ನು ಅರಿತೋ ಏನೋಜ್ಯೋತಿಷಿಗಳು, ಬೂದಿ ಬಾಬಾಗಳು, ಬುರುಡೆ ಶಾಸ್ತ್ರ ಹೇಳುವವರು ಹೆಚ್ಚುತ್ತಿದ್ದಾರೆ. ಅವರ ಸಂಪತ್ತು ವೃದ್ಧಿಸುತ್ತಿದೆ.

ಜನರ ಮೌಢ್ಯ ಹರಿಯದೆ ಇರುವುದಕ್ಕೆ ಮುಖ್ಯ ಕಾರಣ ಓದುವ ಹವ್ಯಾಸ ಕಡಿಮೆ ಆಗಿರುವುದು. ಪಕ್ಕದ ಕೇರಳ ರಾಜ್ಯದ ಜನಸಂಖ್ಯೆ ನಮಗಿಂತ ಕಡಿಮೆ. ಹಾಗಿದ್ದರೂ ಅಲ್ಲಿ ಪ್ರಕಟವಾಗುವ ಪತ್ರಿಕೆಗಳ ಪ್ರಸರಣ ಸಂಖ್ಯೆ ನಮ್ಮಲ್ಲಿರುವುದಕ್ಕಿಂತ ಹಲವು ಪಟ್ಟು ಹೆಚ್ಚಿದೆ. ನಮ್ಮಲ್ಲಿ ಪತ್ರಿಕೆ ಕೊಂಡು ಓದುವ ಕುಟುಂಬಗಳ ಸಂಖ್ಯೆ ಕಡಿಮೆ ಇದೆ.

ಕನ್ನಡದಲ್ಲಿ ಪುಸ್ತಕ ಓದುವವರ ಸಂಖ್ಯೆಯೂ ಕಡಿಮೆಯೇ. ಭಾಷಾಭಿಮಾನವಂತೂ ಶೋಚನೀಯವಾಗಿದೆ. ಕೇರಳದಲ್ಲಿ ಜನಪ್ರಿಯ ಲೇಖಕರ ಕೃತಿಗಳು ಮೊದಲ ಮುದ್ರಣದಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿಗಳು ಮುದ್ರಣಗೊಂಡು ಒಂದು ವರ್ಷದಲ್ಲಿ ಮಾರಾಟವಾಗುತ್ತವೆ. ನಮ್ಮಲ್ಲಿ ಸಾವಿರ ಪ್ರತಿ ಖರ್ಚಾದರೆ ಹೆಚ್ಚು ಎನ್ನುವ ಸ್ಥಿತಿ ಇದೆ. ಹೀಗಿರುವಾಗ ಬೌದ್ಧಿಕ ದಾರಿದ್ರ್ಯ ಕಳೆದು ವೈಚಾರಿಕತೆ ಬೆಳೆಯುವುದಾದರೂ ಹೇಗೆ?

–ಜೋಗನಹಳ್ಳಿ ಗುರುಮೂರ್ತಿ, ಪಿರಿಯಾಪಟ್ಟಣ

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !