ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟ ತುಂಬಿಸಿದ ನಿದರ್ಶನ ಇದೆಯೇ?

Last Updated 30 ಸೆಪ್ಟೆಂಬರ್ 2020, 15:25 IST
ಅಕ್ಷರ ಗಾತ್ರ

ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮೇಲೆ ಹೇರುವ ಆಗ್ರಹಪೂರ್ವಕ ಒತ್ತಾಯದ ಹಾದಿಯು ಸಾತ್ವಿಕವಾಗಿರಬೇಕು ಎಂದು ಯೋಗಾನಂದ ಅವರು ಆಶಿಸಿದ್ದಾರೆ (ಸಂಗತ, ಸೆ. 30). ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ನಮ್ಮಲ್ಲಿ ನಡೆದಿರುವ ಚಳವಳಿಗಳಲ್ಲಿ ಸಾತ್ವಿಕ ಅಂಶ ಶೂನ್ಯ ಎನ್ನುವುದು ಸತ್ಯ ಸಂಗತಿ. ಬಹುಮತ ಪಡೆದು ಆಡಳಿತಕ್ಕೆ ಬಂದ ಪಕ್ಷವೊಂದು ತಾನು ಜಾರಿ ಮಾಡುವ ಕಾಯ್ದೆ, ನಿಯಮಗಳು ಜನಪರ ಎಂದೇ ತಿಳಿಯುತ್ತದೆ. ಬಂದ್ ಆಯೋಜಕರು ಮತ್ತು ಇದನ್ನು ಸಮರ್ಥಿಸುವವರು ಸರ್ಕಾರದ ಕ್ರಮದ ವಿರುದ್ಧ ವ್ಯಕ್ತವಾಗುವ ಪ್ರತಿಭಟನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ತಮ್ಮ ಹಕ್ಕು ಸ್ಥಾಪಿಸಲು ಮುಂದಾಗುತ್ತಾರೆ. ತಮಾಷೆ ಎಂದರೆ, ಸದ್ಯ ವಿರೋಧ ಪಕ್ಷದಲ್ಲಿ ಇರುವವರೇ ತಾವು ಆಡಳಿತದಲ್ಲಿದ್ದಾಗ ಬಂದ್‌ಗಳನ್ನು ದೂಷಿಸುತ್ತಿದ್ದವರು!

ಕೆಲವು ರಾಷ್ಟ್ರಗಳಲ್ಲಿ ಪ್ರತಿಭಟನೆ ನಡೆಯುವ ರೀತಿನೀತಿಗಳನ್ನು ಲೇಖಕರು ಕೊಟ್ಟಿದ್ದಾರೆ. ಆದರೆ ನಮ್ಮ ಬಂದ್‌ಪ್ರೇಮಿಗಳಿಗೆ ಆ ಕುರಿತು ಸಮ್ಮತಿ ಇಲ್ಲ, ನಮಗೆ ನಮ್ಮದೇ ರೀತಿ! ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ನೆಮ್ಮದಿಗೆ ಅಪಾರ ನಷ್ಟವುಂಟು ಮಾಡಿ ಆಡಳಿತವನ್ನು ಮಣಿಸುವ ಪ್ರಯತ್ನವೇ ಈ ಎಲ್ಲಾ ಬಂದ್‌ಗಳ ಕೊಡುಗೆ. ಆದರೆ ಆಡಳಿತ ಮಣಿಯುವುದಿಲ್ಲ, ನಷ್ಟ ಮತ್ತು ನೆಮ್ಮದಿ ಭಂಗ ತಪ್ಪುವುದಿಲ್ಲ. ನೆಮ್ಮದಿ ಕೆಡಿಸಿಕೊಳ್ಳುವವರು ಮತ್ತು ನಷ್ಟವನ್ನು ಹೊತ್ತುಕೊಳ್ಳುವವರು ಮಾತ್ರ ಸಾಮಾನ್ಯ ಜನರೇ. ಈ ಅನಾಹುತಗಳಿಗೆ ಕಾರಣರಾದ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಂದ ಬಂದ್ ಪ್ರಯುಕ್ತ ಆದ ವಿವಿಧ ಬಗೆಯ ನಷ್ಟವನ್ನು ತುಂಬಿಸಿರುವ ನಿದರ್ಶನ ಇದೆಯೇ?

ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT