ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಸ್ಥಿತಿ ಅಂದೂ ಇಂದೂ ಒಂದೇ

ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ‘ಸಾಮಾನ್ಯ ಜನರಲ್ಲಿ ಇರುವಷ್ಟು ಕನ್ನಡ ಅಭಿಮಾನ, ಉನ್ನತ ಪದವಿಯಲ್ಲಿರುವ ಕನ್ನಡಿಗರಲ್ಲಿಲ್ಲ’ ಎಂದು ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು (ಪ್ರ.ವಾ., 50 ವರ್ಷಗಳ ಹಿಂದೆ, ಅ. 9). ಇದು ಇಂದಿಗೂ ಅನ್ವಯಿಸುವ ಮಾತು. ಅಷ್ಟು ವರ್ಷಗಳ ಹಿಂದೆಯೇ ಕನ್ನಡದ ಸ್ಥಿತಿ ಹಾಗಿತ್ತೆಂದರೆ, ಇಂದು ಹೇಗಿದೆ ಎಂದು ಯೋಚಿಸಬೇಕಾಗಿದೆ.

ಹಳ್ಳಿಹಳ್ಳಿಯಲ್ಲೂ ಇಂಗ್ಲಿಷ್ ಮಾಧ್ಯಮದ ಶಾಲೆಗಳು ರಾರಾಜಿಸುತ್ತಿವೆ. ವಿದ್ಯಾರ್ಥಿಗಳಿಲ್ಲದೆ ಎಷ್ಟೋ ಕನ್ನಡ ಶಾಲೆಗಳು ಮುಚ್ಚಿವೆ. ಕನ್ನಡ ಭಾಷೆ ಐಸಿಯುನಲ್ಲಿ ಉಸಿರಾಡುತ್ತಿರುವುದು ನಿಜ. ಪರಿಷತ್ತು, ನಿಗಮ, ಕಾವಲುಪಡೆ, ಕನ್ನಡ ಪರ ವೇದಿಕೆ ಎಲ್ಲವೂ ಇದ್ದರೂ ಅಂದಿನಿಂದ ಇಂದಿಗೂ ಕನ್ನಡದ ಸ್ಥಿತಿಯೇನೂ ಬದಲಾಗಿಲ್ಲ.

– ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT