ಭಾನುವಾರ, ಏಪ್ರಿಲ್ 11, 2021
30 °C

ವಾಚಕರ ವಾಣಿ: ನಾಡಗೀತೆ; ಚಡಪಡಿಕೆ ಯಾರದ್ದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ನಾಡಗೀತೆಯನ್ನು ನಾವು ಹಾಡುವುದು ಬಹುತೇಕ ನವೆಂಬರ್‌ನಲ್ಲಿ, ಹೊರತುಪಡಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲವು ಕಾರ್ಯಕ್ರಮಗಳಲ್ಲಿ. ನಾಡಗೀತೆ ಹಾಡುವ ಸಮಯ ನಿಗದಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ‘ನಾಡಗೀತೆ ಹಾಡುವಾಗ ಕೆಲವರು ಯಾವಾಗ ಮುಗಿಯುತ್ತದೆ ಎಂದು ಚಡಪಡಿಸುತ್ತಾರೆ’ ಎಂದು ತಿಳಿಸಿರುವುದು ದುರಂತವೇ ಸರಿ. ಏನೇ ಆಗಲಿ, ನಾಡಗೀತೆ ಹಾಡುವ ಸಮಯವನ್ನು ಕಡಿಮೆ ಮಾಡುವ ಭರದಲ್ಲಿ ಪಲ್ಲವಿ, ಚರಣ ಮತ್ತು ಪಲ್ಲವಿಯ ಪುನರಾವರ್ತನೆಗಳನ್ನು ಮೊಟಕುಗೊಳಿಸದೆ, ಮೂಲರೂಪದಲ್ಲೇ ಹಾಡಲಿ. ವರ್ಷಕ್ಕೆ ಎರಡು–ಮೂರು ಬಾರಿ ನಾಡಗೀತೆಯನ್ನು ಹಾಡುವ ಜನಸಾಮಾನ್ಯರು ಅದಕ್ಕಾಗಿ ಕೆಲವು ನಿಮಿಷಗಳನ್ನು ವ್ಯಯಿಸಲು ಚಡಪಡಿಸುವರೇ?

-ದೊರೆಸ್ವಾಮಿ ಮಂಜೇಗೌಡ ಆಲೂರು, ಹಾಸನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು