ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌: ಯುಕ್ತ ನಡೆ

Last Updated 3 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ಕೊಪ್ಪಳದಲ್ಲಿ ಆಟಿಕೆಗಳ ಕ್ಲಸ್ಟರ್ ಸ್ಥಾಪಿಸಲು ಮುಂದಾಗಿರುವುದನ್ನು ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು ಪ್ರಶ್ನಿಸಿದ್ದಾರೆ (ವಾ.ವಾ., ಸೆ.2). ಬೊಂಬೆ ತಯಾರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚನ್ನಪಟ್ಟಣವನ್ನು ಇದಕ್ಕೆ ಪರಿಗಣಿಸದಿರುವುದು ಯುಕ್ತವೇ ಎಂದು ಕೇಳಿದ್ದಾರೆ. ಪ್ರಧಾನಿ ತಮ್ಮ ‘ಮನ್ ಕಿ ಬಾತ್’ನಲ್ಲಿ ಚನ್ನಪಟ್ಟಣದ ಬೊಂಬೆಗಳ ತಯಾರಿಕೆಯನ್ನಷ್ಟೇ ಪ್ರಸ್ತಾಪಿಸದೆ, ದೇಶದ ಹಲವಾರು ಐತಿಹಾಸಿಕ ಪ್ರದೇಶಗಳನ್ನು ಮತ್ತು ವಿಶೇಷಗಳನ್ನು ಪ್ರಸ್ತಾಪಿಸಿದ್ದಾರೆ.

ಚನ್ನಪಟ್ಟಣದ ಬೊಂಬೆಗಳು ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದಿರುವುದೇನೋ ನಿಜ. ಅದರಂತೆ ಕೊಪ್ಪಳದ ಕಿನ್ನಾಳ ಬೊಂಬೆಗಳೂ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಕೊಪ್ಪಳದ ಪರಿಸರಕ್ಕೂ ಬಹು ಪ್ರಾಚೀನ ಇತಿಹಾಸವಿದೆ. ರಾಮಾಯಣ, ಮಹಾಭಾರತದಲ್ಲಿ ನಡೆದ ಘಟನಾವಳಿಗಳ ಐತಿಹ್ಯಗಳು ಇಲ್ಲಿವೆ. ಕೊಪ್ಪಳ ಪ್ರದೇಶವು ಬೌದ್ಧ- ಜೈನ ಧರ್ಮದ ಶ್ರದ್ಧಾಕೇಂದ್ರ
ವಾಗಿತ್ತು. ಕಲೆಗಳಿಗೆ ಪ್ರಸಿದ್ಧಿ ಪಡೆದ ಇಟಗಿಯ ಮಹಾದೇವ ದೇವಾಲಯ ಇದೇ ಜಿಲ್ಲೆಯಲ್ಲಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ಸರ್ಕಾರವು ಕೊಪ್ಪಳದಲ್ಲಿ ಬೊಂಬೆಗಳ ಕ್ಲಸ್ಟರ್ ಸ್ಥಾಪಿಸಲು ನಿರ್ಧರಿಸಿರುವುದು ಸೂಕ್ತವಾಗಿಯೇ ಇದೆ.

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT