ನಮಗೇಕೆ ಇಂಥ ನೀರು?

7

ನಮಗೇಕೆ ಇಂಥ ನೀರು?

Published:
Updated:

ನಾಡಿಗೆ ಚಿನ್ನವನ್ನೂ, ಚಿನ್ನದಂಥ ವ್ಯಕ್ತಿಗಳಾದ ಸರ್ ಎಂ. ವಿಶ್ವೇಶ್ವರಯ್ಯ, ವಿಜ್ಞಾನಿ ಸಿ.ಎನ್.ಆರ್. ರಾವ್ ಅವರನ್ನೂ ನೀಡಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಅಪಾಯಕಾರಿ ಲೋಹಗಳಿರುವ ನೀರನ್ನು ತುಂಬುವುದು ಎಷ್ಟು ಸರಿ?

ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಹಾಗೂ ಸಹಸ್ರಾರು ಜನರಿಗೆ ಕುಡಿಯುವ ನೀರು ಒದಗಿಸುವಂಥ ಕೆಆರ್‌ಎಸ್ ಅಣೆಕಟ್ಟು ಯೋಜನೆಯ ಜನಕನ ತವರಿಗೆ, ಬೆಂಗಳೂರಿನ ಕಲುಷಿತ, ಅಪಾಯಕಾರಿ ಲೋಹಮಿಶ್ರಿತ ನೀರು! ಇದು ಯಾವ ನ್ಯಾಯ ಮುಖ್ಯಮಂತ್ರಿಯವರೇ? ಇಂಥ ನೀರನ್ನು ಕುಡಿದ ರೈತಾಪಿ ಜನರು, ಜಾನುವಾರು ಗಳು ಮತ್ತು ಈ ನೀರನ್ನು ಬಳಸಿ ಬೆಳೆಯುವ ಆಹಾರ ಸೇವಿಸಿ ಜನರು ಲೋಹ (ರೋಗ) ಮನುಷ್ಯರಾಗಬೇಕೇ?

ಸಂಭವಿಸಬಹುದಾದ ಅಪಾಯ ತಡೆಯಲು ಮುಖ್ಯಮಂತ್ರಿ ಕೂಡಲೇ ಕ್ರಮ ಕೈಗೊಳ್ಳಬೇಕು.

ಸು. ಜಗದೀಶ್, ಬೆಂಗಳೂರು
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !