ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮರೆಯಾಗುತ್ತಿದೆ ಕೋವಿಡ್‌ ಮಾರ್ಗಸೂಚಿ

Last Updated 27 ಡಿಸೆಂಬರ್ 2021, 18:28 IST
ಅಕ್ಷರ ಗಾತ್ರ

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ಸರಿಯಷ್ಟೆ. ಆದರೆ ಕೊರೊನಾ ಒಂದನೇ ಮತ್ತು ಎರಡನೇ ಅಲೆ ಕಾಲಘಟ್ಟದಲ್ಲಿ ಅನುಭವಿಸಿದ ಸಾವು-ನೋವು, ಭಂಗ, ಬಡತನ, ವಲಸೆ ಅಲೆದಾಟದ ಅನುಭವ ಎಲ್ಲವನ್ನೂ ಮರೆತು ಜನ ಈಗ ಬಿಡುಬೀಸಾಗಿ ಭಕ್ತಿಯ ಅಮಲೇರಿಸಿ ಕೊಂಡು ಗುಡಿ, ಚರ್ಚು, ಮಸೀದಿಗಳಲ್ಲಿ ಗುಂಪು ಸೇರುವುದು ಇತ್ತೀಚೆಗೆ ಅತಿಯಾಗುತ್ತಿದೆ. ಧಾರ್ಮಿಕ ಸ್ಥಳವೊಂದರಲ್ಲಿ ಇತ್ತೀಚೆಗೆ ಸಾವಿರಾರು ಗಂಡಸರು, ಮಕ್ಕಳು, ಮಹಿಳೆಯರು ದರ್ಶನಕ್ಕೆಂದು ಅಂತರ ಕಾಯ್ದು ಕೊಳ್ಳದೆ, ಮಾಸ್ಕುಗಳಿಲ್ಲದೆ ಒತ್ತೊತ್ತಾಗಿ 6-7 ಗಂಟೆ ಸರದಿಯಲ್ಲಿ ಕಾದು ನಿಂತಿದ್ದರಂತೆ. ಅದನ್ನು ಕಂಡ ನಮ್ಮ ಸ್ನೇಹಿತ ರೊಬ್ಬರು ಬೇಸರ ವ್ಯಕ್ತಪಡಿಸಿದರು. ಹೀಗೆ ಅನೇಕ ಕಡೆ ಭಕ್ತಜನ ಕೊರೊನಾ ಮಾರಿಯನ್ನು ಮರೆತು ವರ್ತಿಸು ವುದುಂಟು. ಅಣುರೇಣು ತೃಣಕಾಷ್ಠದಲ್ಲಿಯೂ ಭಗವಂತನಿದ್ದಾನೆ. ಅವನ ಇಚ್ಛೆ ಇಲ್ಲದೆ ಒಂದು ಗರಿಕೆಯೂ ಅಲ್ಲಾಡದು ಎನ್ನುತ್ತದೆ ನಮ್ಮ ಆರ್ಷೇಯವಾಣಿ. ಹೀಗಿರುವಾಗ ದೇವರ ದರ್ಶನ, ಹಬ್ಬ, ಮದುವೆ, ಪ್ರವಾಸ, ರಾಜಕೀಯ ಪ್ರಚಾರಸಭೆ, ಹೊಸ ವರ್ಷಾಚರಣೆಯಂತಹ ಸಂದರ್ಭಗಳಲ್ಲಿ ಜನರು ಕೊರೊನಾ ಮಾರ್ಗಸೂಚಿಯನ್ನು ಮರೆತು ಗುಂಪು ಸೇರುವುದು ‘ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಹೊಕ್ಕು ಹೋಗು’ ಎಂಬಂತೆ ಆಗುತ್ತದೆಯಲ್ಲವೇ?

- ಪ್ರೊ. ಶಿವರಾಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT