ಬಿಜೆಪಿಯು ಸುಮಾರು ಒಂದು ಲಕ್ಷ ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸಲು ಯೋಜಿಸಿದೆ ಎನ್ನಲಾಗಿದೆ. ಪ್ರಚಾರ ತಂತ್ರದ ದೃಷ್ಟಿಯಿಂದ ಇದೊಂದು ಪರಿಣಾಮಕಾರಿ ಕ್ರಮ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ಮನೆಯ ರಾಜಕೀಯ ನಿಲುವು ಮತ್ತು ಬದ್ಧತೆ ಮತದಾನದಷ್ಟೇ ಗೋಪ್ಯವಾಗಿ ಇರಬೇಕಾಗುತ್ತದೆ. ಈ ರೀತಿ ಮನೆಯ ಮೇಲೆ ಧ್ವಜ ಹಾರಿಸುವುದರಿಂದ ಈ ಗೋಪ್ಯತೆ ಬಹಿರಂಗವಾಗಿ, ಅದು ಅಕ್ಕಪಕ್ಕದಲ್ಲಿ ರಾಜಕೀಯ ದ್ವೇಷಕ್ಕೆ ಕಾರಣವಾಗುತ್ತದೆ. ಒಂದು ಪಕ್ಷ ಧ್ವಜ ಹಾರಿಸಿದರೆ, ಹುಚ್ಚು ಸ್ಪರ್ಧೆ ಉಂಟಾಗಿ ಇನ್ನೊಂದು ಪಕ್ಷವೂ ಈ ಹಾದಿ ಹಿಡಿಯುತ್ತದೆ. ಇದು ಮನೆ ಮನೆಯಲ್ಲಿ, ಹಳ್ಳಿ ಹಳ್ಳಿಯಲ್ಲಿ ಪರಸ್ಪರ ವೈಷಮ್ಯ ಉಂಟುಮಾಡುತ್ತದೆ.

ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಾಗ, ಪಕ್ಷ ರಾಜಕೀಯವನ್ನು ಹಳ್ಳಿಹಳ್ಳಿಗೆ ಪರಿಚಯಿಸಿ, ಗ್ರಾಮಾಂತರ ಪ್ರದೇಶದಲ್ಲಿ ಶಾಂತಿಯನ್ನು ಕಲಕಬೇಡಿ ಎಂದು ಹಲವರು ಅದನ್ನು ವಿರೋಧಿಸಿದ್ದರು.

- ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.