ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸಮಾಜ ತಲೆತಗ್ಗಿಸಬೇಕಾದ ವಿಷಯ

Last Updated 25 ಜನವರಿ 2023, 16:43 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯಲ್ಲಿ ವಯೋವೃದ್ಧೆಯೊಬ್ಬರನ್ನು ಸಂಬಂಧಿಕರು ದಟ್ಟ ಅರಣ್ಯದಲ್ಲಿ ಬಿಟ್ಟುಹೋಗಿರುವ ದೃಶ್ಯವನ್ನು ಕಂಡು (ಪ್ರ.ವಾ., ಜ. 24) ಮನ ಕಲಕಿತು. ಇಂದಿನ ಪೀಳಿಗೆಯವರಲ್ಲಿ ಪ್ರೀತಿ, ವಾತ್ಸಲ್ಯ ಮರೀಚಿಕೆ ಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿತು. ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವವರನ್ನು ಕಂಡಿದ್ದೇವೆ. ಆದರೆ, ಕಾಟ ಕೊಡುವ ನಾಯಿ, ಬೆಕ್ಕುಗಳನ್ನು ಸಾಕಲಾರದೆ ದೂರ ಬಿಟ್ಟುಬರುವ ರೀತಿಯಲ್ಲಿ ವಯೋವೃದ್ಧೆಯನ್ನು ನೀರು, ನೆರಳು ಇಲ್ಲದಿರುವ ಜಾಗದಲ್ಲಿ ಬಿಟ್ಟು ಹೋಗಿರುವುದು ಅತ್ಯಂತ ಅಮಾನವೀಯ ಹಾಗೂ ಖಂಡನೀಯ. ಇದು, ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಷಯ. ಸಾಕಲಾಗದಿದ್ದರೆ ವೃದ್ಧಾಶ್ರಮಕ್ಕೆ ಸೇರಿಸಬಹುದಿತ್ತು. ಅದುಬಿಟ್ಟು ಹುಳ ಹುಪ್ಪಟೆಗಳು ಇರುವ ಹುಲ್ಲುಗಾವಲಿನಂಥ ಸ್ಥಳದಲ್ಲಿ ಕಸವನ್ನು ಎಸೆಯುವ ರೀತಿಯಲ್ಲಿ ತ್ಯಜಿಸಿ ಹೋಗಿರುವುದು ಹೃದಯಹೀನ ವರ್ತನೆ. ಒಬ್ಬ ವೃದ್ಧೆಯನ್ನು ಸಾಕಲಾರದಷ್ಟು ಹೀನಾಯ ಸ್ಥಿತಿಯಲ್ಲಿದ್ದರೇ ಆಕೆಯ ಸಂಬಂಧಿಕರು? ಊರಿನ ಜನರಾದರೂ ಅವರಿಗೆ ಬುದ್ಧಿ ಹೇಳಲಿಲ್ಲವೇ? ವೃದ್ಧೆಯ ನರಳಾಟ ಕೇಳಿ ಉಪಚರಿಸಿ, ಆಸ್ಪತ್ರೆಗೆ ಸೇರಿಸಿದ ವ್ಯಕ್ತಿಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿರುವುದು ಪ್ರಶಂಸನೀಯ.

- ಪ.ಚಂದ್ರಕುಮಾರ ಗೌನಹಳ್ಳಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT