ವಾಚಕರ ವಾಣಿ| ಚಿರತೆ ರಕ್ಷಿಸಿ, ಅಮಾಯಕರ ಜೀವ ಉಳಿಸಿ
ಟಿ. ನರಸೀಪುರದಲ್ಲಿ ನಡೆದ ಚಿರತೆ ದಾಳಿಯಲ್ಲಿ ಪುಟ್ಟ ಹುಡುಗನೊಬ್ಬ ಸಾವಿಗೀಡಾಗಿರುವುದು ನೋವಿನ ಸಂಗತಿ. ಇತ್ತೀಚೆಗೆ ರಾಜ್ಯದ ಕೆಲವು ಕಡೆ ಚಿರತೆಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ. ಆಗಾಗ ಮನುಷ್ಯರ ಮೇಲೆ ದಾಳಿ ನಡೆಸುತ್ತಲೇ ಇವೆ. ಮೂರು ತಿಂಗಳಲ್ಲಿ ಒಟ್ಟು ನಾಲ್ಕು ಸಾವುಗಳು ಚಿರತೆಗಳಿಂದಾಗಿ ಸಂಭವಿಸಿವೆ. ಚಿರತೆಗಳು ನಾಡಿಗೆ ಬರಲು ಕಾರಣ ಕಾಡಿನ ನಾಶವೇ ಆಗಿದೆ. ಕಾಡಿನಲ್ಲಿ ಜಾಗವಿಲ್ಲದೆ ಅವು ನಾಡಿಗೆ ಬರುತ್ತಿವೆ.
ಚಿರತೆಗಳಿಂದ ಜನರ ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಕಾಡುಗಳನ್ನು ಸಂರಕ್ಷಣೆ ಮಾಡಬೇಕು. ನಾಡಿಗೆ ಬಂದಂತಹ ಚಿರತೆಗಳನ್ನು ಕೂಡಲೇ ಹಿಡಿದು ಸುರಕ್ಷಿತ ಸ್ಥಳಕ್ಕೆ ಸೇರಿಸಬೇಕು. ಈ ಮೂಲಕ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು.
- ಪೂಜಾ ಎಸ್., ಕಲಬುರಗಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.