ಭಾನುವಾರ, ಜನವರಿ 26, 2020
22 °C

ಅಂಗೈ ಹುಣ್ಣಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದೇಶದ ಅನೇಕ ನಗರಗಳಲ್ಲಿ ವಿಷಪೂರಿತ ಗಾಳಿಯ ಮಟ್ಟವು ಹೆಚ್ಚಾಗಿದ್ದು, ಶೀಘ್ರವೇ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಜನರ ಜೀವಿತಾವಧಿ ಮತ್ತು ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮವಾಗಲಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಮಾರಿಯಾ ನೀರಾ ಹೇಳಿದ್ದಾರೆ. ಇತ್ತ ಕೇಂದ್ರ ಪರಿಸರ ಸಚಿವರು ‘ವಾಯುಮಾಲಿನ್ಯದಿಂದ ಜನರ ಜೀವಿತಾವಧಿ
ಯಲ್ಲಿ ಬದಲಾವಣೆ ಆಗುತ್ತದೆ ಎಂಬುದಕ್ಕೆ ಭಾರತದಲ್ಲಿ ಅಧ್ಯಯನಗಳು ನಡೆದಿಲ್ಲ’ ಎಂದಿದ್ದಾರೆ.

ವಾಯುಮಾಲಿನ್ಯದಿಂದ ಜನರು ಗಂಭೀರ ತೊಂದರೆಗಳಿಗೆ ಈಡಾಗುತ್ತಿರುವುದು ಸಚಿವರಿಗೆ ತಿಳಿದಿಲ್ಲವೇ? ವಾಯುಮಾಲಿನ್ಯ ನಿಯಂತ್ರಿಸಲು ಸಚಿವರು ಪರಿಶ್ರಮ ಪಡಬೇಕೇ ಹೊರತು ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಟೀಕಿಸುವುದಲ್ಲ. ಅಂಗೈ ಹುಣ್ಣಿಗೆ ಕನ್ನಡಿಹಿಡಿದಂತೆ, ವಾಯುಮಾಲಿನ್ಯದಿಂದ ಜನರ ಆರೋಗ್ಯ ಹಾಳಾಗುತ್ತಿರುವುದಕ್ಕೆ ಇನ್ನೂ ಅಧ್ಯಯನಗಳು ಬೇಕೆ?

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ
 

ಪ್ರತಿಕ್ರಿಯಿಸಿ (+)