ಶನಿವಾರ, ಅಕ್ಟೋಬರ್ 23, 2021
22 °C

ವಾಚಕರ ವಾಣಿ: ಕಾಳಿಂಗ ಸರ್ಪ ಸಂರಕ್ಷಣೆಗೆ ಆಕ್ಷೇಪ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಿಂಗ ಸರ್ಪ ದಟ್ಟ ಕಾಡುಗಳಲ್ಲಿ ಇರುವ ಸರೀಸೃಪ. ಇದರ ಮೊಟ್ಟೆ ಸಂರಕ್ಷಣೆ ಮಾಡಿದ್ದಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ (ಪ್ರ.ವಾ., ಆ. 25). ಪಶ್ಚಿಮಘಟ್ಟಗಳಲ್ಲಿ ಮಾತ್ರ ವಾಸಿಸುವ ಇವುಗಳ ಸಂತತಿ ಉಳಿಯಬೇಕಿದೆ. ಅನಾಥವಾಗಿದ್ದ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಯಾದ ನಂತರ ಕಾಡಿಗೆ ಬಿಡಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಮತ್ತು ಉಸ್ತುವಾರಿಯಲ್ಲಿ ಈ ಕಾರ್ಯ ನಡೆದಿದೆ.

ಈ ರೀತಿಯ ಒಳ್ಳೆಯ ಕೆಲಸವನ್ನು ಕೆಲವರು ಮಾಡುತ್ತಿರುವುದರಿಂದ ಹಲವು ಜೀವಿಗಳು ಸ್ವಲ್ಪವಾದರೂ ಸಂರಕ್ಷಿಸಲ್ಪಟ್ಟಿವೆ. ಪಶ್ಚಿಮಘಟ್ಟಗಳನ್ನು ಹಾಳುಮಾಡುತ್ತಿರುವ ಬೃಹತ್ ಯೋಜನೆಗಳಿಗೆ ಏನೂ ಹೇಳದೆ, ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಿದ್ದಕ್ಕೆ ಆಪಾದನೆ ಮಾಡುವುದು ಸರಿಯಲ್ಲ.

ಡಾ. ಎಸ್. ಶಿಶುಪಾಲ, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.