ಮಂಗಳವಾರ, ಫೆಬ್ರವರಿ 7, 2023
27 °C

ಕಾಂಗ್ರೆಸ್‌ನಲ್ಲಿ ಕಸುವು ಉಳಿದಿರಬಹುದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪದಾಧಿಕಾರಿಗಳಿಗೆ ನೀಡಿರುವ ‘ಹೊಣೆ ನಿರ್ವಹಿಸಿ, ಇಲ್ಲಾ ದಾರಿ ಬಿಡಿ’ ಎಂಬ ಕರೆ (ಪ್ರ.ವಾ., ಡಿ. 5), ಪಕ್ಷದಲ್ಲಿ ಇನ್ನೂ ಕಸುವು ಉಳಿದಿರಬಹುದು ಎಂಬುದಕ್ಕೆ ಸೂಚನೆ ನೀಡುವಂತಿದೆ! ದೇಶದ ಪ್ರಸಕ್ತ ರಾಜಕೀಯವು ಗತಿ ಮತ್ತು ಆಕೃತಿಗಳನ್ನು ಕಳೆದುಕೊಂಡಂತಿದೆ. ವ್ಯಕ್ತಿಗತ ಅಧಿಕಾರ
ಲಾಲಸೆಗೆ ಮಾತಿನ ಮೋಡಿಯ ಮುಸುಕುಹಾಕಿ ಅದನ್ನು ಮುನ್ನೂಕುವ ಚಾಲಾಕೇ ದೇಶವನ್ನಾಳುವ ಸಾಮರ್ಥ್ಯ ಎಂದು
ಆಲಸಿ ಮಹಾಜನತೆಯನ್ನು ನಂಬಿಸಲಾಗಿದೆ. ಹಾಗಾಗಿ ಮಹಾಜನತೆ ವೈಚಾರಿಕತೆಯನ್ನು ಬದಿಗೊತ್ತಿ ನಿದ್ದೆಗೆ ಜಾರಿದೆ.

ಜನಜಾಗೃತಿ ಎಂಬುದು ಇಂದಿನ ತುರ್ತು ಅಗತ್ಯ. ಖರ್ಗೆಯವರ ಈ ಮಾತು ಅಷ್ಟನ್ನಾದರೂ ಮಾಡುವಲ್ಲಿ ಯಶಸ್ವಿಯಾದರೆ, ಪ್ರತಿಪಕ್ಷವೆನಿಸಿರುವ ಕಾಂಗ್ರಸ್ ತನ್ನ ಆ ಸ್ಥಾನಕ್ಕೆ ಸಾರ್ಥಕತೆ ಕಲ್ಪಿಸಿದಂತೆ ಆಗುತ್ತದೆ!

ಆರ್.ಕೆ.ದಿವಾಕರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.