ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಿಕ್ಕು ತಪ್ಪಿಸುವ ಪ್ರಕರಣ

ಅಕ್ಷರ ಗಾತ್ರ

ಮಂಡ್ಯದ ಗಣಿ ವಿವಾದ ಮತ್ತು ಚಿತ್ರನಟ ದರ್ಶನ್ ಅವರಿಗೆ ಬ್ಲ್ಯಾಕ್‌ಮೇಲ್ ಪ್ರಕರಣಗಳೆರಡೂ ಸುದ್ದಿ ಮಾಧ್ಯಮಗಳಲ್ಲಿ ಕೆಲ ದಿನಗಳಿಂದ ವರ್ಣರಂಜಿತವಾಗಿ ಪ್ರಕಟವಾಗುತ್ತಿವೆ. ಮೇಲ್ನೋಟಕ್ಕೆ ಇವು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹವು ಮತ್ತು ಕೆಲವೇ ದಿನಗಳಲ್ಲಿ ಜನಮಾನಸದಿಂದ ಮರೆಯಾಗುವಂತಹವು.

ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಕುರಿತು ಸಂಸದೆ ಸುಮಲತಾ ಅಂಬರೀಷ್‌ ನೀಡಿದ ಹೇಳಿಕೆಯು ಬರೀ ಮಂಡ್ಯದ ಜನರಿಗಷ್ಟೇ ಅಲ್ಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದಿಗಿಲು ತರುವಂತಹ ವಿಷಯ. ಹೀಗಿದ್ದಾಗ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಪ್ರಸ್ತಾಪದ ಧ್ವನಿಯನ್ನು ಬೆಂಬಲಿಸಬೇಕಿತ್ತೇ ವಿನಾ ಅಸಂಬದ್ಧ ಹೇಳಿಕೆಗಳನ್ನು ನೀಡುವುದಲ್ಲ.

ಇನ್ನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮನೆಗೆ ಬಂದ ದಿನವೇ ನಟ ದರ್ಶನ್ ಯಾಕೆ ಜಾಗರೂಕರಾಗಲಿಲ್ಲ? ತೋಟದ ಪರಿಶೀಲನೆಗೆಂದು ಬರುವ ತನಕವೂ ಕಾಯಬೇಕಿತ್ತೇ? ಗೊಂದಲದ ಈ ಎರಡೂ ಸುದ್ದಿಗಳ ಹಿಂದೇನೋ ಮಸಲತ್ತಿನ ಘಾಟು ಬಡಿಯುತ್ತಿರುವಂತಿದೆ.

- ಗೋಪು ಗೋಖಲೆ,ಶಿಶಿಲ, ಬೆಳ್ತಂಗಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT