ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದಿಗ್ಧ ಸಮ್ಮತಿಯಾಗದು!

Last Updated 14 ಅಕ್ಟೋಬರ್ 2018, 20:03 IST
ಅಕ್ಷರ ಗಾತ್ರ

ಈಗ ದೇಶದಾದ್ಯಂತ ‘ಮೀ ಟೂ’ ಗಾಳಿ ಬೀಸುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಎಷ್ಟೋ ವರ್ಷಗಳ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅನೇಕ ಮಹಿಳೆಯರು ಮುಂದಾಗುತ್ತಿದ್ದಾರೆ. ಪ್ರಾದೇಶಿಕ ಮಟ್ಟದಲ್ಲಿಯೂ, ನಿರ್ದಿಷ್ಟವಾಗಿ ಇಂಥ ಕಿರುಕುಳಗಳನ್ನು ಮಹಿಳಾ ಉದ್ಯೋಗಿಗಳು ಮತ್ತು ನಟಿಯರು ಬಲಿಷ್ಠ ‘ಯಜಮಾನ’ರ ಕೈಲಿ ಅನುಭವಿಸಿರಬಹುದು. ಇದೆಲ್ಲಾ ಖಾಸಗಿಯಾಗಿ ಮತ್ತು ಕ್ಯಾಮೆರಾದ ಹಿಂದೆ ನಡೆದ ಘಟನೆಗಳಿರಬಹುದು. ಕೆಲವು ಚಿತ್ರಗಳ ಸ್ಥಾಯಿ ಶೈಲಿಯನ್ನು ಗಮನಿಸಿದರೆ ಕ್ಯಾಮೆರಾದ ಹಿಂದೆ ಮಾತ್ರವಲ್ಲ, ಮುಂದೆಯೂ, ಪರದೆಯ ಮೇಲೂ ಇಂಥ ಕಿರುಕುಳಗಳನ್ನು ನಟನೆಯ ಹೆಸರಿನಲ್ಲಿ ಮಹಿಳೆಯರು ಅನುಭವಿಸಿದ್ದಾರೆಂದು ಅನ್ನಿಸುತ್ತದೆ.

ಹಣ- ಕೀರ್ತಿ- ರಾಜಕೀಯ ಮುಂತಾದ ಬಲವಿರುವ ನಿರ್ಮಾಪಕ, ನಿರ್ದೇಶಕ- ನಟರ ಕೈಗೆ ಸಿಲುಕಿದ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರು, ನಾಯಕ ನಟಿಯರೂ ಜೀವನೋಪಾಯ ಕಳೆದುಕೊಳ್ಳುವ, ಮೂಲೆಗುಂಪಾಗುವ, ಅವಕಾಶ ವಂಚಿತರಾಗುವ ಭಯದ ಕಾರಣದಿಂದ ಪ್ರತಿಭಟಿಸುವ ಸ್ಥಿತಿಯಲ್ಲಿರುವುದಿಲ್ಲ. ಹಣ ಮತ್ತು ಅಧಿಕಾರ ಬಲದ ಶೋಷಣೆಗೆ ಸಿಲುಕಿದ ಸಂತ್ರಸ್ತರ ಲೈಂಗಿಕ ಕಿರುಕುಳವನ್ನು ಗೆರೆ ಎಳೆದಂತೆ ತಾರ್ಕಿಕವಾಗಿ ನಿರ್ವಚಿಸುವುದು ಕಷ್ಟ. ಆದರೆ ಆ ಸಂದಿಗ್ಧವನ್ನು ಬಳಸಿಕೊಂಡು ಅದನ್ನೇ ‘ಸಮ್ಮತಿ’ ಎಂದು ಹೇಳಿದರೆ ಒಪ್ಪುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT