ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ತೊಡೆಯಲು ಪ್ರೇರಣೆ

Last Updated 9 ಮಾರ್ಚ್ 2021, 19:31 IST
ಅಕ್ಷರ ಗಾತ್ರ

‘ಹೀಗೂ ಸಾಧ್ಯ ಪರಿವರ್ತನೆ!’ ಎಂಬ ಲೇಖನದಲ್ಲಿ (ಸಂಗತ, ಮಾರ್ಚ್‌ 9) ಮಲ್ಲಿಕಾರ್ಜುನ ಹೆಗ್ಗಳಗಿ ಅವರು ಮಹಾರಾಷ್ಟ್ರ– ಕರ್ನಾಟಕದ ಗಡಿ ಭಾಗದ ಹಳ್ಳಿಯೊಂದರಲ್ಲಿ ಅಸ್ಪೃಶ್ಯತೆ ಆಚರಣೆ ಬಗ್ಗೆ ಜನರ ಮನೋಭಾವ ಬದಲಾಗಿದ್ದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ನಿಜಕ್ಕೂ ಇದೊಂದು ಮನುಷ್ಯರ ಒಳಗಣ್ಣು ತೆರೆಸುವಂತಹ ಬರಹ.

ಪ್ರಕಾಶ ಖೇಡ ಎಂಬುವರು ತಮ್ಮ ಶಕ್ತಿ, ಸಾಮರ್ಥ್ಯ, ಸಾಧನೆ ಮತ್ತು ಸಂಸ್ಕಾರದಿಂದ ಹಳ್ಳಿಯ ಜನರ ಮನಸ್ಸನ್ನು ಗೆದ್ದು, ಹಳ್ಳಿಯಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರೇರಣೆಯಾದದ್ದು, ಗುಡಿಯ ಜೀರ್ಣೋದ್ಧಾರಕ್ಕೆ ಹಣ ನೀಡಿ, ಅದರ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡುವಂತೆ ಹಳ್ಳಿಗರನ್ನು ಕೋರಿದ್ದು, ಜನ ಅವರ ಮಾತಿನಂತೆ ದೇವಸ್ಥಾನಕ್ಕೆ ಮುಕ್ತ ಅವಕಾಶ ನೀಡಿದ್ದು ನಿಜಕ್ಕೂ ಒಂದು ಸಾಮಾಜಿಕ ಕ್ರಾಂತಿ. ಅಂಬೇಡ್ಕರ್‌, ಗಾಂಧಿಯವರ ಕನಸು ಕೂಡ ಇದೇ ಆಗಿತ್ತು. ನಾಗರಿಕ ಸೌಲಭ್ಯಗಳು ಸಾಮಾನ್ಯರಿಗೆ ಸಿಗುವಷ್ಟು ಸುಲಭವಾಗಿ ದಲಿತ ಜನಾಂಗಕ್ಕೂ ಸಿಗಬೇಕು ಎಂಬುದಾಗಿತ್ತು. ಅವರ ಕನಸನ್ನು ಈಡೇರಿಸುವ ದಿಸೆಯಲ್ಲಿ ಪ್ರಕಾಶ ಖೇಡ ಅವರ ಪ್ರಯತ್ನ ಶ್ಲಾಘನೀಯ.

-ಪ್ರಾಣೇಶ ಪೂಜಾರ್ ಗಿಣಗೇರಾ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT