ಗುರುವಾರ , ಆಗಸ್ಟ್ 22, 2019
22 °C

ಸೆಕ್ಯುಲರ್‌ ಗಣರಾಜ್ಯಕ್ಕೆ ಜಯಂತಿಯ ಉಸಾಬರಿ ಏಕೆ?

Published:
Updated:

ಗಾಂಧಿ ಜಯಂತಿ ಮತ್ತು ಅಂಬೇಡ್ಕರ್‌ ಜಯಂತಿ ವಿನಾ ಬೇರೆ ಯಾರ ಜಯಂತಿಗಳನ್ನೂ ಸರ್ಕಾರ ಆಚರಿಸಬಾರದು ಎಂಬ ಅಭಿಪ್ರಾಯವನ್ನು ಭೀಮಾಶಂಕರ ಹಳಿಸಗರ ವ್ಯಕ್ತಪ‍ಡಿಸಿದ್ದಾರೆ (ವಾ.ವಾ., ಆ.2). ನಮ್ಮದು ಸೆಕ್ಯುಲರ್ ಗಣರಾಜ್ಯ. ಸರ್ಕಾರಕ್ಕೂ ಜಾತಿ ಮತಗಳಿಗೂ ಯಾವ ಸಂಬಂಧವೂ ಇರಬಾರದು. ಹೀಗಿರುವಾಗ, ನಮ್ಮ ದೇಶ ನಿಜವಾಗಿಯೂ ಸೆಕ್ಯುಲರ್ ಎಂಬ ದೃಢ ವಿಶ್ವಾಸವಿದ್ದರೆ, ಯಾರೊಬ್ಬರ ಜಯಂತಿಯನ್ನೂ ಸರ್ಕಾರದ ವತಿಯಿಂದ ಆಚರಿಸಬಾರದು. ಈಗಿರುವ ಶಿಕ್ಷಕರ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆಯ ಜೊತೆಗೆ ಹುತಾತ್ಮರ ದಿನಾಚರಣೆ ಎಂದಷ್ಟೇ, ರಜೆ ಕೊಡದೆ ಸರಳವಾಗಿ ಆಚರಿಸಲಿ. ಆಯಾ ಧರ್ಮದವರಿಗೆ ಅವರವರ ಹಬ್ಬಗಳ ಸಂದರ್ಭದಲ್ಲಿ ನಿರ್ಬಂಧಿತ ರಜೆ (ಆರ್‌.ಎಚ್) ನೀಡುವುದು ಒಳ್ಳೆಯದು.

–ವಿನಿತಾ ಕೆ.ಸಿ., ಕುಶಾಲನಗರ

Post Comments (+)