ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತರರು ಎಲ್ಲಿದ್ದಾರೆ?

Last Updated 26 ಜುಲೈ 2018, 19:30 IST
ಅಕ್ಷರ ಗಾತ್ರ

‘ಮನಸು ಬೆಸೆವ ಆಟಗಳೂ ವ್ಯಾಪಾರವಾಗಿಬಿಟ್ಟರೆ...’ (ಪ್ರ.ವಾ., ಜುಲೈ 22) ಲೇಖನದಲ್ಲಿ ಪ್ರಕಾಶ್‌ ರೈ ಅವರು, ‘ದೇಶದ ಹೆಚ್ಚು ಕಡಿಮೆ ಎಲ್ಲಾ ಕ್ರೀಡೆಗಳನ್ನು ತಿಂದು ಕುಡಿದಿರುವ ಕ್ರಿಕೆಟ್, ಒಂದು ಬಗೆಯಲ್ಲಿ ವ್ಯಾಪಾರವಾಗಿದ್ದು, ಇದರಿಂದ ಅನೇಕ ಆಭಾಸ ಹಾಗೂ ಆಪತ್ತುಗಳು ಸಂಭವಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲೇಖನದ ಅಂತ್ಯದಲ್ಲಿ, ‘ಶಾಲೆ, ವಿದ್ಯಾ ಕೇಂದ್ರಗಳು, ಆಸ್ಪತ್ರೆಗಳು, ಚಿಕಿತ್ಸೆ, ಧರ್ಮ ಹಾಗೂ ದೈವನಂಬಿಕೆ ವ್ಯಾಪಾರವಾಗಿ ಬಿಟ್ಟಿರುವ ಇಲ್ಲಿ ಇನ್ನೂ ಬಹಳ ಪಾಠಗಳನ್ನು ಕಲಿಯಬೇಕಾಗುತ್ತದೆ’ ಎಂಬ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ, ಅದು ಸಮಂಜಸ.

ಆದರೆ ಮೇಲೆ ತಿಳಿಸಿದ ಎಲ್ಲದಕ್ಕೂ ಪಾಠ ಕಲಿಸುವ ಮಾಸ್ತರರನ್ನು ಎಲ್ಲಿಂದ, ಹೇಗೆ ಹುಡುಕುವುದು ಎಂಬುದೇ ದೊಡ್ಡ ಪ್ರಶ್ನೆ. ಈ ಸಂಬಂಧ ರೈ ಆಗಲೀ ಅವರ ಹಿತೈಷಿಗಳ ಗುಂಪಾಗಲೀ ಪರಿಹಾರ ಹುಡುಕಿದಲ್ಲಿ ರಾಜ್ಯಕ್ಕೆ, ದೇಶಕ್ಕೆ ಒಂದು ಕೊಡುಗೆ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT