ಪೂರ್ವಗ್ರಹ ಪೀಡಿತ ದೃಷ್ಟಿ

7

ಪೂರ್ವಗ್ರಹ ಪೀಡಿತ ದೃಷ್ಟಿ

Published:
Updated:

ವಿಮರ್ಶಕರು ಕೊಲೆಗಡುಕರು’– ಎಂದಿದ್ದಾರೆ ಕವಿ ದೊಡ್ಡರಂಗೇಗೌಡರು (ಪ್ರ.ವಾ. ಜೂ.18) ಗೌಡರು ಒಬ್ಬ ಸಿನಿಮಾ ಸಾಹಿತಿಯಾಗಿ ಶ್ರೇಷ್ಠರೆಂಬುದು ಸರಿ. ಆದರೆ ಸಿನಿಮಾ ಕ್ಷೇತ್ರಕ್ಕೆ ಹೋಗಿ ಮರಳಿ ಗಂಭೀರ ಸಾಹಿತ್ಯ ಕ್ಷೇತ್ರಕ್ಕೆ ಬಂದಾಗ ಅವರ ಸಾಹಿತ್ಯ ಕೃಷಿ ತುಂಬ ನೀರಸವಾಯ್ತು. ನಿರೂಪಣೆ–ಭಾಷೆ ಕೂಡ ಗದ್ಯಗಂಧಿಯಾಗಿ ವಾಚ್ಯವಾಯ್ತು. ರಾಜಕಾರಣಿಗಳ ನಟನಾಚಾತುರ್ಯವನ್ನು ಅರಿಯದೆ ಅವರು ಈಚೆಗೆ ಬರೆದ ಕವಿತೆಗಳು ನಿರುಪಯುಕ್ತ, ಹೊಗಳು ಸಾಹಿತ್ಯವಾಯ್ತೆ ಹೊರತು ಓದುಗರ ಅರಿವನ್ನು ಹೆಚ್ಚಿಸಲಿಲ್ಲ. ಈ ಥರದ ಸಾಹಿತ್ಯಕ ಒಳನೋಟಗಳ ಪ್ರಜ್ಞೆ ಅವರಿಗಿಲ್ಲವೆನ್ನಲಾಗದು. ಸ್ವತಃ ಕನ್ನಡ ಪ್ರಾಧ್ಯಾಪಕರಾಗಿ, ಅತ್ಯುತ್ತಮ ವಾಗ್ಮಿಯೂ ಆದ ಅವರು ವಿಮರ್ಶೆಯನ್ನು ಅರ್ಥ ಮಾಡಿಕೊಳ್ಳದಿರುವುದು ಪೂರ್ವಗ್ರಹ ಪೀಡಿತ ದೃಷ್ಟಿಗೆ ಸಾಕ್ಷಿಯಾಗಿದೆ.

–ಹುರುಕಡ್ಲಿ ಶಿವಕುಮಾರ್, ಬಾಚಿಗೊಂಡನಹಳ್ಳಿ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !