ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಷ್ಟ್ರಪತಿ ರೈಲು ಪ್ರಯಾಣದ ಹಿಂದೆ...

Last Updated 27 ಜೂನ್ 2021, 17:42 IST
ಅಕ್ಷರ ಗಾತ್ರ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶುಕ್ರವಾರ ರೈಲಿನಲ್ಲಿ ಪ್ರಯಾಣಿಸಿದ್ದರಲ್ಲಿ (ಪ್ರ.ವಾ., ಜೂನ್‌ 27) ವಿಶೇಷವೇನೂ ಇಲ್ಲ. ರಾಷ್ಟ್ರಪತಿ ರೈಲಿನಲ್ಲಿ ಪಯಣಿಸುವ ಸಲುವಾಗಿ ವಿಲಾಸಿ ಬೋಗಿ, ಅದನ್ನು ಹತ್ತಲು ವಿಶೇಷ ಮೆಟ್ಟಿಲು ಮತ್ತು ಕಂಬಿಗಳು, ಅದಕ್ಕೆಂದೇ ಕೆಲವೇ ನಿಲುಗಡೆಗಳು... ಅಬ್ಬಾ ಒಂದೇ ಎರಡೇ. ಆದರೆ ಇವರು ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಭದ್ರತೆಗೆಂದು ವಾಹನ ಸಂಚಾರವನ್ನು ತಡೆಹಿಡಿದಾಗ, ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಾವನ್ನಪ್ಪಿರುವುದು ದುರದೃಷ್ಟಕರ.

ರಾಷ್ಟ್ರಪತಿ ಇವೆಲ್ಲವನ್ನೂ ತೊರೆದು ಸಾಮಾನ್ಯ ಪ್ರಜೆಯಂತೆ ರೈಲಿನಲ್ಲಿ ಪ್ರಯಾಣಿಸಿದ್ದರೆ ಅದೊಂದು ವಿಶೇಷ ಎನ್ನಬಹುದಿತ್ತು. ಅವರ ಈ ಪ್ರಯಾಣಕ್ಕೆ ಅದೆಷ್ಟು ರೈಲ್ವೆ, ಪೊಲೀಸ್‌, ಸುರಕ್ಷತೆ ಮತ್ತಿತರ ಸಿಬ್ಬಂದಿ ನಿದ್ದೆಗೆಟ್ಟು ಕಷ್ಟಪಟ್ಟಿದ್ದರೋ?
-ವಿಜಯ್‌ ಹೆಮ್ಮಿಗೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT