ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹಿಮ್ಮುಖ ಚಲನೆಯತ್ತ ಜನರ ಜೀವನ

ಅಕ್ಷರ ಗಾತ್ರ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಜೀವನ ಹಿಮ್ಮುಖವಾಗಿ ಚಲಿಸಲು ಪ್ರಾರಂಭವಾಗಿದೆ. ಅನೇಕ ಮನೆಗಳಲ್ಲಿ ಅಡುಗೆಗಾಗಿ ಮೊದಲು ಉತ್ತಮ ಗುಣಮಟ್ಟದ ಎಣ್ಣೆ ಬಳಸುತ್ತಿದ್ದವರು ಈಗ ವಿಧಿಯಿಲ್ಲದೆಬಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಾಗಿದೆ. ಗ್ಯಾಸ್ ಒಲೆಗಳ ಬದಲಾಗಿ ಸೌದೆ ಒಲೆಗಳಿಗೆ ಮೊರೆ ಹೋಗುತ್ತಿದ್ದಾರೆ. ಕಡಿಮೆ ದರದ ಎಣ್ಣೆ ಮತ್ತು ಸೌದೆ ಬಳಕೆಯು ಪರಿಸರ ಮಾಲಿನ್ಯ, ಪರಿಸರ ನಾಶದ ಜೊತೆಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಇರುತ್ತದೆ. ದುಬಾರಿಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

–ವಡ್ನಾಳ್ ರಮೇಶ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT