ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿನಿಂದ ರಾಜಕೀಯವೇಕೆ?

Last Updated 16 ನವೆಂಬರ್ 2021, 15:15 IST
ಅಕ್ಷರ ಗಾತ್ರ

‘ಹೆಸರಿನಿಂದ ಪ್ರಿಯಾಂಕ್ ಖರ್ಗೆ ಹೆಣ್ಣೋ ಗಂಡೋ ತಿಳಿಯುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿರುವುದು ದಿನವಿಡೀ ದೃಶ್ಯಮಾಧ್ಯಮದಲ್ಲಿ ಪ್ರಸಾರಗೊಂಡಿತು. ಈ ಬಗೆಯ ಹೆಸರುಗಳು ಅಸಂಖ್ಯ ಇವೆ. ವಿಜಯಾ ಎಂದರೆ ಸ್ತ್ರೀಲಿಂಗ, ವಿಜಯ್ ಎಂದರೆ ಪುಲ್ಲಿಂಗ. ಪ್ರಿಯಾಂಕಾ ಹೆಣ್ಣು, ಪ್ರಿಯಾಂಕ್ ಗಂಡು, ಮನೀಷಾ ಹೆಣ್ಣಾದರೆ, ಮನೀಷ್ ಗಂಡು... ಇನ್ನು ಕೆಲ ಹೆಸರುಗಳು ಉಭಯ ಲಿಂಗಕ್ಕೂ ಸೈ. ಉದಾಹರಣೆಗೆ: ಕಿರಣ, ಕೀರ್ತಿ ಇತ್ಯಾದಿ. ದಶಕಗಟ್ಟಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಸಾಧನೆಗೆ ಹೆಸರು ಅಡ್ಡಿಯಾಗಿತ್ತೇ? ಹತಾಶೆ, ಅಸಹನೆ, ಕಸಿವಿಸಿ ನಮ್ಮ ಸಂಯಮವನ್ನು ಕಸಿಯಬಾರದು. ಘನತೆಯುಳ್ಳ ಸ್ಥಾನದಿಂದ ಘನತೆಯುಳ್ಳ ಮಾತುಗಳಿರಲಿ.

-ರಾಮಚಂದ್ರ ಎಸ್. ಕುಲಕರ್ಣಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT