ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ದೃಷ್ಟಿಯಿಂದ ಹೊರತಾಗಿರಲಿ ಬಜೆಟ್

Last Updated 30 ಜನವರಿ 2019, 20:15 IST
ಅಕ್ಷರ ಗಾತ್ರ

ಬಹುತೇಕ ಬಜೆಟ್‍ಗಳು ಚುನಾವಣಾ ದೃಷ್ಟಿಕೋನದಲ್ಲಿಯೇ ಮಂಡನೆಯಾಗುತ್ತವೆ ಮತ್ತು ಅವುಗಳ ಅನುಷ್ಠಾನದಲ್ಲೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ.

ಜನಸಾಮಾನ್ಯರು ಸರ್ಕಾರಗಳಿಂದ ಬಯಸುವುದು ಬಜೆಟ್‍ನ ಗಾತ್ರವನ್ನಲ್ಲ. ಬಜೆಟ್ ಕೇವಲ ಸಾಲಮನ್ನಾಗಳಿಗೆ ಸೀಮಿತವಾಗದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ಕಾರಿ ಸೇವೆಗಳ ಅನುದಾನವನ್ನು ಹೆಚ್ಚಿಸಬೇಕು. ಮೂಲ ಸೌಕರ್ಯ, ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿ, ಕಾರ್ಮಿಕ ವಲಯಕ್ಕೆ ಪ್ರೋತ್ಸಾಹ, ಹಳ್ಳಿಗಳ ಅಭಿವೃದ್ಧಿ, ಬಡತನ ನಿರ್ಮೂಲನೆಯತ್ತ ಆಸಕ್ತಿ ವಹಿಸುವುದರೊಂದಿಗೆ ಮಧ್ಯಮ, ತಳ ವರ್ಗದ ಆಶೋತ್ತರಗಳಿಗೆ ಸ್ಪಂದಿಸುವ ಯೋಜನೆಗಳನ್ನು ರೂಪಿಸಬೇಕು.

ರೈಲ್ವೆ, ಸಾರಿಗೆ, ರಸ್ತೆ, ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ. ಹೀಗಾಗಿ, ಚುನಾಯಿತ ಸರ್ಕಾರಗಳು ಬಜೆಟ್‌ನಲ್ಲಿ ರಾಜಕೀಯ ಲಾಭಕ್ಕೆ ಹೆಚ್ಚು ಮಾನ್ಯತೆ ನೀಡದೆ ಪ್ರಜೆಗಳ ಹಿತ ಕಾಯುವ ಸಂಕಲ್ಪ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT