ನಮ್ಮನ್ನು ರಂಜಿಸಲು ಮುಖ್ಯಮಂತ್ರಿ ಆಗಾಗ್ಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾ ಇರುತ್ತಾರೆ. ಅಸಹಾಯಕನಂತೆ ಕಣ್ಣೀರು ಹಾಕುತ್ತಾ ವೇದಿಕೆಯ ಮೇಲೆ ಮಾತನಾಡುವುದು, ಸಾಂದರ್ಭಿಕ ಶಿಶುವಿನಂತೆ ಆಲಾಪಿಸುವುದು, ಕೆಲವೇ ದಿನಗಳಲ್ಲಿ ಮರಣಿಸುತ್ತೇನೆ ಎಂಬಂತೆ ರೋದಿಸುವುದು ಮುಂತಾಗಿ.
ಈಗ ನಮಗೆ ಹೊಸ ತೋಳವೊಂದನ್ನು ತೋರಿಸುತ್ತಿದ್ದಾರೆ. ಅದೇ ರಾಜೀನಾಮೆ ತೋಳ. ಅದು ಆಚೆಗೆ ಬರುವುದೋ ಅಥವಾ ಬೋನಿನಲ್ಲೇ ಇದ್ದುಕೊಂಡು ಹೆದರಿಸುವುದೋ ಎಂಬ ಕುತೂಹಲವಷ್ಟೇ ಈಗ ಉಳಿದಿರುವುದು.