ಹದಿಹರೆಯದ ಮನಸ್ಸು ಹದಗೊಳಿಸಿ

7

ಹದಿಹರೆಯದ ಮನಸ್ಸು ಹದಗೊಳಿಸಿ

Published:
Updated:

ಬೆಂಗಳೂರಿನ ಕಾಲೇಜೊಂದರಲ್ಲಿ ಹುಡುಗನೊಬ್ಬ ತನ್ನ ಸಹಪಾಠಿಯನ್ನು ಕೊಂದಿರುವುದು ಬಹಳ ಆತಂಕಕಾರಿ ಘಟನೆ. ಭಾವನೆಗಳ ಅತಿರೇಕಗಳನ್ನು ಸೃಷ್ಟಿಸುವಲ್ಲಿ ಮೊಬೈಲ್ ಅಪ್ಲಿಕೇಷನ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಇಂದಿನ ಶಿಕ್ಷಣ ವ್ಯವಸ್ಥೆಯು ಯುವ ಮನಸ್ಸುಗಳ ಭಾವತೀವ್ರತೆ, ಆಕರ್ಷಣೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಬರೀ ಅಂಕ ಗಳಿಕೆಗೆ ಒತ್ತು ಕೊಡುತ್ತಿದೆ. ಮತ್ತೊಂದೆಡೆ, ಯುವ ಮನಸ್ಸಿನ ಪ್ರೀತಿ, ಸ್ನೇಹ, ವ್ಯಾಮೋಹಗಳ ಬುನಾದಿಯನ್ನೇ ಗುರಿಯಾಗಿಟ್ಟಿರುವ ಸಾಮಾಜಿಕ ಜಾಲತಾಣಗಳು ಹಾಗೂ ಹೊಸ ತಂತ್ರಜ್ಞಾನಗಳು ಅವರ ಏಕಾಗ್ರತೆಯನ್ನು ಭಂಗಗೊಳಿಸುತ್ತಿವೆ.

ಈ ನಿಟ್ಟಿನಲ್ಲಿ ಪೋಷಕರು, ಉಪನ್ಯಾಸಕರು, ಶಿಕ್ಷಣ ವ್ಯವಸ್ಥೆಯ ನೀತಿ ನಿರೂಪಕರು ಒಗ್ಗಟ್ಟಾಗಿ, ಹದಿಹರೆಯದ ತಾಕಲಾಟಗಳ ತಹಬಂದಿಗೆ ಪರಿವರ್ತನೆಯ ದಾರಿಗಳನ್ನು ಕಂಡುಕೊಳ್ಳಬೇಕು. ಅತಿರೇಕದ ಭಾವನೆಗಳನ್ನು ತಿಳಿಸಿ ಹೇಳಹೇಕು. ಬೆಳೆಯುವ ಹಂತದಲ್ಲಿ ಕಳೆಯ ರೀತಿ ಬೆಳೆಯುವ ಆಕ್ರಮಣಕಾರಿ ಗುಣವನ್ನು ಬೇರುಸಮೇತ ಕಿತ್ತು ಹಾಕಲು ಪ್ರೋತ್ಸಾಹಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !