ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹೈನೋದ್ಯಮ: ಪರಿಹಾರ ಕ್ರಮ ರೂಪಿಸಿ

Last Updated 29 ಜುಲೈ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಕಂಟೈನ್‌ಮೆಂಟ್‌ ವಲಯಕ್ಕೆ ಒಳಪಟ್ಟಿರುವ ಗ್ರಾಮಗಳಲ್ಲಿ ರೈತರಿಂದ ಹಾಲು ಖರೀದಿ ನಡೆಯುತ್ತಿಲ್ಲ. ಹೀಗಾಗಿ ಈ ರೈತರು ಹಾಲನ್ನು ಭೂಮಿಗೆ ಸುರಿಯುತ್ತಿದ್ದಾರೆ. ನಗರವಾಸಿಗಳು ಕಾರ್ಖಾನೆ ಹಾಗೂ ಇನ್ನಿತರ ಕೆಲಸಗಳನ್ನು ಬಿಟ್ಟು ಹೈನೋದ್ಯಮಕ್ಕೆ ಇಳಿಯುತ್ತಿರುವುದರಿಂದ ಪ್ರಸ್ತುತ ರೈತರಿಗೆ ನೀಡುವ ಹಾಲಿನ ಮೇಲಿನ ದರ ಇಳಿಕೆಯಾಗಿದೆ. ಹೈನೋದ್ಯಮವನ್ನೇ ನಂಬಿಕೊಂಡಿರುವ ಗ್ರಾಮೀಣ ಪ್ರದೇಶದ ಹಲವಾರು ಕೃಷಿಕ ಕುಟುಂಬಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಹಾಲಿನ ದರ ಕಡಿಮೆಯಾಗಿರುವುದರಿಂದ ಹಸುಗಳ ಪಾಲನೆಯೇ ಕಷ್ಟವಾಗತೊಡಗಿದೆ. ಇನ್ನು ಇದನ್ನು ನಂಬಿರುವ ರೈತರ ಗತಿಯೇನು? ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು.

ಲಕ್ಷ್ಮಿ ಕಿಶೋರ್ ಅರಸ್,ಕೂಡ್ಲೂರು, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT